ವಿಜಯವಾಣಿ ಸುದ್ದಿಜಾಲ ಕೋಟ
ಕೋಡಿತಲೆ ಹೊಸಬೆಂಗ್ರೆ ಪಂಚಶಕ್ತಿ ಸಂಘದ 22ನೇ ವಾರ್ಷಿಕೋತ್ಸವ ಅಂಗವಾಗಿ ಹಿರಿಯ ನಾಗರಿಕರಿಗೆ ಕ್ರಿಕೆಟ್ ಪಂದ್ಯಾಟದ ಸಮಾರೋಪ ಇತ್ತೀಚೆಗೆ ನಡೆಯಿತು. ಆಯುಷ ತಂಡ ಪ್ರಥಮ ಸ್ಥಾನ ಪಡೆದಿದ್ದು, ಓಂಸ್ಟಾರ್ ತಂಡ ದ್ವಿತೀಯ ಸ್ಥಾನಿಯಾಯಿತು.
ಕೋಡಿತಲೆ ಕೊಂಕಣಿ ಖಾರ್ವಿ ಸಮಾಜದ ಅಧ್ಯಕ್ಷ ರಾಮದಾಸ ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ಕೊಂಕಣಿ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗುರುವಂದನಾ ಸಮಿತಿ ಅಧ್ಯಕ್ಷ ಬಿ.ಮಾಧವ ಖಾರ್ವಿ, ಬ್ರಹ್ಮಾವರ ಕೊಂಕಣಿ ಖಾರ್ವಿ ಲೋಕವೇದ್ ಕಲಾಮಂಡ್ ಅಧ್ಯಕ್ಷ ರಾಮಚಂದ್ರ ಖಾರ್ವಿ ಕೋಡಿತಲೆ, ಮುಖಂಡ ಕೃಷ್ಣ ಪಿ.ಖಾರ್ವಿ, ಪಂಚಶಕ್ತಿ ಸಂಘದ ಅಧ್ಯಕ್ಷ ಸಂದೇಶ ಖಾರ್ವಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಂಕರ ಜಯಂತಿ ಆಚರಿಸಲಾಯಿತು. ಬಳಿಕ ಪಾದಯಾತ್ರೆಯ ಹರಿಕಾರ ವೆಂಕಟೇಶ್ ಖಾರ್ವಿ ಅವರನ್ನು ಸನ್ಮಾನಿಸಲಾಯಿತು.
ರವೀಂದ್ರ ಕುಂದಾರ್ ಸ್ವಾಗತಿಸಿದರು. ಸಂಘದ ಗೌರವಾಧ್ಯಕ್ಷ ಮಡಿ ವಿಶ್ವನಾಥ ಖಾರ್ವಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.