ಧಾರವಾಡ: ಮತದಾನದ ವಿನೂತನ ಕ್ರಮವಾದ ಮನೆಯಿಂದಲೇ ಮತದಾನ ಪ್ರಕ್ರಿಯೆ ಜಿಲ್ಲೆಯಾದ್ಯಂತ ಗುರುವಾರ ಬೆಳಗ್ಗೆ ೭ರಿಂದ ನಡೆಯಿತು. ನೋಂದಾಯಿತ ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಮನೆಯಿಂದಲೇ ತಮ್ಮ ಹಕ್ಕು ಚಲಾಯಿಸಿದರು.
ಜಿಲ್ಲಾ ಚುನಾವಣಾಽಕಾರಿ ದಿವ್ಯ ಪ್ರಭು ಅವರು ನಗರದ ಕಮಲಾಪುರ, ಮಾಳಾಪುರ, ಸಾಧನಕೇರಿ, ದೊಡ್ಡನಾಯಕನಕೊಪ್ಪ, ಸಾರಸ್ವತಪುರ ಪ್ರದೇಶಗಳ ಹಿರಿಯ ನಾಗರಿಕರು ಹಾಗೂ ವಿಕಲಚೇತನರ ಮನೆಗಳಿಗೆ ಭೇಟಿ ನೀಡಿ, ಮತದಾನ ಪ್ರಕ್ರಿಯೆ ಪರಿಶೀಲಿಸಿದರು.
ಅಗತ್ಯ ಸೇವೆಯಡಿ ಬರುವ ೧೬ ಇಲಾಖೆಗಳ ನೌಕರರಿಗೆ ಅಂಚೆ ಮೂಲಕ ಮತದಾನದ ಅವಕಾಶ ಕಲ್ಪಿಸಲಾಗಿದೆ. ೧,೧೬೭ ಜನರು ನಮೂನೆ ೧೨ಡಿ ಅಡಿ ಅರ್ಜಿ ಸಲ್ಲಿಸಿದ್ದಾರೆ. ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿನ ಅಂಚೆ ಮತದಾನಕ್ಕಾಗಿ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಮೇ ೧ರಿಂದ ೩ರವರೆಗೆ ಮತದಾನ ಕೇಂದ್ರ ತೆರೆಯಲಾಗುತ್ತದೆ ಎಂದು ಚುನಾವಣಾಽಕಾರಿ ದಿವ್ಯ ಪ್ರಭು ತಿಳಿಸಿದರು.
ಅಂಚೆ ಮತಪತ್ರ ವಿನಿಮಯ ಕೇಂದ್ರ ಸ್ಥಾಪನೆ:
ಜಿಲ್ಲೆಯಲ್ಲಿ ಕರ್ತವ್ಯ ನಿರತ ನೌಕರರು ಮತ್ತು ಬೇರೆ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ನೌಕರರು ಅಂಚೆ ಮತಪತ್ರ ಪಡೆಯಲು ಅನುಕೂಲವಾಗುವಂತೆ ಚುನಾವಣಾ ಆಯೋಗವು ಪ್ರಥಮ ಬಾರಿಗೆ ಎಕ್ಸಚೇಂಜ್ ಸೆಂಟರ್ ತೆರೆದಿದೆ. ಅದು ನಗರದ ಆರ್.ಎಲ್.ಎಸ್. ಕಾಲೇಜಿನಲ್ಲಿ ಕಾರ್ಯ ನಿªರ್ಕ್ಷಿಹಿಸಲಿದೆ ಎಂದರು.