ಹುಬ್ಬಳ್ಳಿ: ಕರ್ನಾಟಕದ 80 ಲಕ್ಷ ಹಿರಿಯ ನಾಗರಿಕರ ಕಾನೂನು ಬದ್ಧ ಬೇಡಿಕೆ ಹಾಗೂ ಸಮಸ್ಯೆಗಳ ಕುರಿತು ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮಂಗಳವಾರ ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರೊಂದಿಗೆ ಚರ್ಚಿಸಿದರು.
ಸಂಘದ ರಾಜ್ಯಾಧ್ಯಕ್ಷ ಬಿ.ಎ. ಪಾಟೀಲ್ ನೇತೃತ್ವದಲ್ಲಿ ನಗರದಿಂದ ನಿಯೋಗದಲ್ಲಿ ತೆರಳಿ ಸಚಿವರನ್ನು ಭೇಟಿಯಾಗಿ ವಿವಿಧ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಿದರು. ಕಳೆದ ಬಜೆಟ್ ನಲ್ಲಿ ಮಂಡನೆಯಾಗಬೇಕಿದ್ದ ಹಿರಿಯ ನಾಗರಿಕರ ಬೇಡಿಕೆಗಳು, ಹಿರಿಯ ನಾಗರಿಕರ ಕಾನೂನು 2007ರ ಅನುಷ್ಠಾನ, ಹಿರಿಯ ನಾಗರಿಕರ ಮೇಲಿನ ದೌರ್ಜನ್ಯಗಳ ಕುರಿತು ಚರ್ಚಿಸಲಾಯಿತು.
ಸಚಿವರು ಇಲಾಖೆಯ ಅಧಿಕಾರಿಗಳ ಸಭೆ ಕರೆದು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸಂಘದ ರಾಜ್ಯಮಟ್ಟದ ಸುಮಾರು 50ಕ್ಕೂ ಹೆಚ್ಚು ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಬೆಳಗಾವಿ ಜಿಲ್ಲಾ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಬಿ.ಎ. ಬೆಂಡಿಗೇರಿ, ಉಪಾಧ್ಯಕ್ಷ ಎಸ್.ಜಿ. ಸಿದ್ನಾಳ, ಕಾರ್ಯದರ್ಶಿ ಎ.ಸಿ. ಮುದಕವಿ, ಹುಬ್ಬಳ್ಳಿಯ ಡಿ.ಎ. ಪಾಟೀಲ್, ವಿಠ್ಠಲ, ಆರ್.ಟಿ. ದೊಡ್ಡಮನಿ, ಬಿ.ಎಂ. ರೇಡಿಬಾಳ, ಆರ್.ಟಿ. ಹೆಬ್ಬಾರ ಹಾಗೂ ಸುನಂದಾ ಬೆನ್ನೂರ, ಜಯಲಕ್ಷ್ಮಿ ಉಮಚಗಿ, ಅನುರಾಧ ಕಾಮತ್ ಮುಂತಾದವರು ಉಪಸ್ಥಿತರಿದ್ದರು.