ಹುಬ್ಬಳ್ಳಿ: ವಿಶ್ವ ಸಂಸ್ಥೆಯ ಘೋಷಣೆಯಂತೆ ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದೌರ್ಜನ್ಯ ತಡೆ ದಿನಾಚರಣೆ ನಿಮಿತ್ತ ಹುಬ್ಬಳ್ಳಿ ತಹಸೀಲ್ದಾರ್ ಕಚೇರಿ ಹಾಗೂ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿ ಸರ್ಕಾರಕ್ಕೆ ಹಿರಿಯ ನಾಗರಿಕರ ಬೇಡಿಕೆ, ಸಮಸ್ಯೆ ಕುರಿತು ಮನವಿ ಸಲ್ಲಿಸಲಾಯಿತು.
ಹುಬ್ಬಳ್ಳಿ ತಹಸೀಲ್ದಾರ ಕಚೇರಿ ಮುಂದೆ ನಡೆದ ಸತ್ಯಾಗ್ರಹದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂದ ಅಧ್ಯ ಬಿ.ಎ. ಪಾಟೀಲ ಮಾತನಾಡಿ, ಹಿರಿಯ ನಾಗರಿಕರ ದೌರ್ಜನ್ಯಗಳು ಹೆಚ್ಚಾಗಲು ಸರ್ಕಾರದ ನಿರ್ಲಕ್ಷ್ಯ ಕಾರಣವೆಂದರು. ಹಿರಿಯ ನಾಗರಿಕರ ನ್ಯಾಯಬದ್ಧ ಬೇಡಿಕೆಗಳನ್ನು ಈಡೇರಿಸದೇ ಹೋದಲ್ಲಿ ಮುಂದಿನ ಎಲ್ಲ ಚುನಾವಣೆಯಲ್ಲಿ ಹಿರಿಯ
ನಾಗರಿಕರ ಅಭಿಪ್ರಾಯ ಸಂಗ್ರಹಿಸಿ ಹೋರಾಟ ಮಾರ್ಗ ರೂಪಿಸಲಾಗುವದೆಂದು ತಿಳಿಸಿದರು.
ಜಾನಪದ ತಜ್ಞ ಡಾ. ರಾಮೂ ಮೂಲಗಿ, ಹಿರಿಯ ನಾಗರಿಕರ ಬೇಡಿಕೆ ಕುರಿತು ರಚಿಸಿದ ಜಾನಪದ ಗೀತೆ ಹಾಡಿ ಹುರಿದುಂಬಿಸಿದರು.
ಸಂಘದ ಪದಾಧಿಕಾರಿಗಳಾದ ಡಾ. ಲಿಂಗರಾಜ ಅಂಗಡಿ, ಡಾ. ಡಿ.ಟಿ. ಪಾಟೀಲ, ವಿಠ್ಠಲ ಖ್ಯೆರೆ, ಪಿ.ಪಿ. ಗಾಯಕವಾಡ, ಆರ್.ಎಂ. ಚಿಕ್ಕವಿರಮಠ, ಆರ್.ಟಿ. ದೊಡಮನಿ, ಎಸ್.ಎಂ. ಕೋಳೂರ, ಜಯಲಕ್ಷ್ಮಿ ಉಮಚಗಿ, ರೇಣುಕಾ ನವಲಗುಂದ, ಈರಣ್ಣ ಕಾಡಪ್ಪನವರ, ಕೆ.ಎಸ್. ಪತ್ತಾರ ಮುಂತಾದವರು ಇದ್ದರು.
ಧಾರವಾಡ ವಿಭಾಗದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಧರಣಿ ಸತ್ಯಾಗ್ರಹದ ಮುಖಂಡತ್ವವನ್ನು ಹಿರಿಯ ನಾಗರಿಕರ ಮಹಿಳಾ ವಿಭಾಗದ ರಾಜ್ಯ ಸಮಿತಿ ಅಧ್ಯಕ್ಷೆ ಡಾ. ಸುನಂದಾ ಬೆನ್ನೂರ, ಪದಾಧಿಕಾರಿಗಳಾದ ಜಿ.ಸಿ. ಅರಳಿ, ಎಸ್.ಎಂ. ಸಲಕಿ, ಬಸವರಾಜ ಪಾಟೀಲ, ಎಂ.ಡಿ. ಪಾಟೀಲ ಮುಂತಾದವರು ನೇತತ್ವ ವಹಿಸಿದ್ದರು. ಜಿಲ್ಲಾಧಿಕಾರಿಗಳು ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು.