ಜಿಲ್ಲೆ

ಜೀವನ ಗೌರವ ಅಭಿಯಾನ ಸಭೆ 18ಕ್ಕೆ

ಹುಬ್ಬಳ್ಳಿ: ಎಲ್ಲ ಹಿರಿಯ ನಾಗರಿಕರನ್ನು ರಾಷ್ಟ್ರದ ಸಂಪತ್ತು ಎಂದು ಘೋಷಣೆ ಮಾಡುವದು, ಆರ್ಥಿಕವಾಗಿ ದುರ್ಬಲರಾದ ಹಿರಿಯರಿಗೆ ಮಾಸಿಕ ಹತ್ತು ಸಾವಿರ ರೂ. ಪಿಂಚಣಿ ನೀಡುವುದು ಸೇರಿ ವಿವಿಧ ವಿಷಯಗಳ ಚರ್ಚಿಸಲು ಹಿರಿಯ ನಾಗರಿಕರ ಜೀವನ ಗೌರವ ಅಭಿಯಾನದ ಕರ್ನಾಟಕ ರಾಜ್ಯ ಟಕದ ಸಭೆ ಆ. 18ರಂದು ಮಧ್ಯಾಹ್ನ 2ಕ್ಕೆ ನಗರದ ಹೊಸೂರಲ್ಲಿರುವ ಹಿರಿಯ ನಾಗರಿಕರ ಕಚೇರಿಯಲ್ಲಿ ಏರ್ಪಡಿಸಲಾಗಿದೆ.

ಸಂಘದ ರಾಷ್ಟ್ರಾಧ್ಯಕ್ಷ ವಿಜಯ ದೇಶಮುಖ, ರಾಜ್ಯ ಸಂಚಾಲಕ ಆರ್.ಕೆ. ಮಠದ, ಕಾರ್ಯಾಧ್ಯಕ್ಷ ಎಂ.ಡಿ. ಪಾಟೀಲ, ರಾಷ್ಟ್ರೀಯ ಉಪಾಧ್ಯಕ್ಷ ಡಾ. ಕಮಲ ಮನೋಹರ ಮುಂತಾದವರು ಸಭೆಯಲ್ಲಿ ಪಾಲ್ಗೊಳ್ಳುವರು.
ಹಿರಿಯ ನಾಗರಿಕರು ಸಭೆಗೆ ಆಗಮಿಸಿ ಸಲಹೆ ಸೂಚನೆ ನೀಡಬಹುದು ಎಂದು ರಾಜ್ಯಾಧ್ಯಕ್ಷ ಬಿ.ಎ. ಪಾಟೀಲ ತಿಳಿಸಿದ್ದಾರೆ.