ಸುಬ್ರಹ್ಮಣ್ಯ: ಸೀನಿಯರ್ ಚೇಂಬರ್ ಇಂಟರ್‌ನ್ಯಾಶನಲ್ ಸುಬ್ರಹ್ಮಣ್ಯ ಘಟಕದ ೨೦೨೪-೨೫ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕುಮಾರಧಾರದ ಜೇಸಿ ಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಸೀನಿಯರ್ ಚೇಂಬರ್‌ನ ಅಧ್ಯಕ್ಷ ವಿಶ್ವನಾಥ ನಡುತೋಟ ವಹಿಸಿದ್ದರು. ಸೀನಿಯರ್ ಚೇಂಬರ್‌ನ ರಾಷ್ಟ್ರೀಯ ಅಧ್ಯಕ್ಷ ಚಿತ್ರಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ಪೂರ್ವಾಧ್ಯಕ್ಷ ಡಾ.ಅರವಿಂದರಾವ್ ಕೇದಿಗೆ, ಆಡಳಿತ ವಿಭಾಗದ ನಿರ್ದೇಶಕ ನವೀನ್ ಅಮೀನ್, ಉಪಾಧ್ಯಕ್ಷ ಕಿಶೋರ್ ಫರ್ನಾಂಡಿಸ್ ಮುಖ್ಯ ಅತಿಥಿಗಳಾಗಿದ್ದರು.
ಸೀನಿಯರ್ ಚೇಂಬರ್ ಕಾರ್ಯದರ್ಶಿ ಮೋನಪ್ಪ ಡಿ., ಕೋಶಾಧಿಕಾರಿ ಪ್ರಕಾಶ್ ಕಟ್ಟೆಮನೆ, ಸದಸ್ಯರುಗಳಾದ ಚಂದ್ರಶೇಖರ ನಾಯರ್, ಗೋಪಾಲ ಎಣ್ಣೆಮಜಲ್, ಪ್ರಭಾಕರ ಪಡ್ರೆ, ಲೋಕೇಶ್ ಬಿ.ಎ. ಉಪಸ್ಥಿತರಿದ್ದರು.
ಗೌರವಾರ್ಪಣೆ : ರಾಷ್ಟ್ರೀಯ ಉಪಾಧ್ಯಕ್ಷ ಕಿಶೋರ್ ಫರ್ನಾಂಡಿಸ್ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಸೀನಿಯರ್ ಚೇಂಬರ್ ಅಧ್ಯಕ್ಷ ವಿಶ್ವನಾಥ ನಡುತೋಟ ನೂತನ ಅಧ್ಯಕ್ಷ ಡಾ.ರವಿ ಕಕ್ಕೆಪದವು ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವರ್ಷಾ ಬೇಕಲ್ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ರಾಧಿಕಾ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರಾಂಶುಪಾಲ ಅಶೋಕ್ ಮೂಲೆಮಜಲು ಹಾಗೂ ಮುತ್ತುಕುಮಾರ್ ಹೊಸ ಸದಸ್ಯರಾಗಿ ಸೇರ್ಪಡೆಗೊಂಡರು.