ಜಿಲ್ಲೆ

ಸುಳ್ಳು ಸಂದೇಶಗಳನ್ನು ಕಳುಹಿಸಿ, ಸಹೋದ್ಯೋಗಿಯ ಮದುವೆ ಮುರಿದ ಕಿಡಿಗೇಡಿ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಇಷ್ಟಪಟ್ಟ ಹುಡುಗನೊಂದಿಗೆ ಆಕೆಗೆ ನಿಶ್ಚಿತಾರ್ಥವಾಗಿತ್ತು. ಕುಟುಂಬಸ್ಥರು ಮದುವೆಯ ಸಿದ್ಧತೆಯಲ್ಲಿದ್ದರು. ಇದರ ನಡುವೆ ಬಂದ ಕಿಡಿಗೇಡಿಯೊಬ್ಬ ಸುಳ್ಳು ಸಂದೇಶಗಳನ್ನು ಕಳುಹಿಸಿ ಸಂಭ್ರಮಕ್ಕೆ ಕಲ್ಲು ಹಾಕಿದ್ದಾನೆ. ಈಗ ಯುವತಿಯ ಮದುವೆ ನಿಂತು ಹೋಗಿದೆ.

ಹೌದು! ಮದುವೆಯಾಗಲು ಒಪ್ಪದ ಯುವತಿಯ ಬಗ್ಗೆ ಸಹೋದ್ಯೋಗಿಯೇ ತಪ್ಪು ಭಾವನೆ ಮೂಡುವ ಸಂದೇಶಗಳನ್ನು ಕಳುಹಿಸಿ, ಮದುವೆ ನಿಲ್ಲಿಸಿದಕ್ಕೆ ಸಂಬಂಧಿಸಿದಂತೆ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

*ಪ್ರಕರಣದ ಹಿನ್ನೆಲೆ

ಬೆಂಗಳೂರಿನಲ್ಲಿನ ಖಾಸಗೀ ಕಂಪನಿಯ ನೌಕರ ಮೀರ್ ಮೌಸೀನ್ ಆರೋಪಿ. ಹಲವು ಬಾರಿ ಚಿಂತಾಮಣಿಯ ಯುವತಿಯನ್ನು ಪ್ರೀತಿಸಲು ಒತ್ತಾಯಿಸಿದ್ದಾನೆ. ಆದರೆ, ಇದಕ್ಕೆ ಆಕೆ ಸಹಮತ ವ್ಯಕ್ತಪಡಿಸಿಲ್ಲ. ಕುಟುಂಬಸ್ಥರು ನೋಡಿದ ಹುಡುಗನನ್ನೇ ಮದುವೆಯಾಗುವುದಾಗಿ ಖಡಕ್ ಆಗಿ ಹೇಳಿದ್ದಾಳೆ. ಹಾಗೆಯೇ ಬೆಂಗಳೂರಿನಲ್ಲಿ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಶುಭ ಕಾರ್ಯಕ್ರಮವಾದ ಮದುವೆಯ ದಿನವು ನಿಗದಿಯಾಗಿತ್ತು. ಇದನ್ನು ಕಿಡಿಗೇಡಿ ಸಹಿಸದೇ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಯ ಮೂಲಕ ಸಂತ್ರಸ್ಥೆಯ ಭಾವಿ ಪತಿಗೆ ಚಾರಿತ್ರö್ಯಹರಣದ ಸಂದೇಶಗಳನ್ನು ಕಳುಹಿಸಿ, ಮದುವೆ ನಿಲ್ಲಿಸಿದ್ದು ಇದನ್ನು ಪ್ರಶ್ನಿಸಿದಾಗ ಪ್ರಾಣ ಬೆದರಿಕೆಯೊಡ್ಡಿದ್ದಾನೆ. ಇದರ ಬಗ್ಗೆ ಚಿಂತಾಮಣಿ ನಗರದ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.