ಮಾನ್ವಿಯಲ್ಲಿ ಮಕ್ಕಳ ಭಿಕ್ಷಾಟನೆ ಬಗ್ಗೆ ಕಾರ್ಮಿಕ ಇಲಾಖೆಯಿಂದ ಮಂಗಳವಾರ ಜಾಗೃತಿ ಮೂಡಿಸಲಾಯಿತು. 
ಜಿಲ್ಲೆ

ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಿ

Gangavati - Desk - Veeresh S Ullagaddi

ಮಾನ್ವಿ: ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಮಕ್ಕಳನ್ನು ಭಿಕ್ಷೆ ಬೇಡಲು ಕಳಿಸುವುದು ಸರಿಯಲ್ಲ ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನಾಧಿಕಾರಿ ಮಂಜುನಾಥರೆಡ್ಡಿ ಹೇಳಿದರು.

ಮಕ್ಕಳು ಭಿಕ್ಷೆ ಬೇಡುತ್ತಿರುವುದನ್ನು ಕಂಡು ದಾಳಿ

ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳ ಸಹಯೋಗದಲ್ಲಿ ಪಟ್ಟಣದಲ್ಲಿನ ಬಸ್ ನಿಲ್ದಾಣ ಹಾಗೂ ಎಪಿಎಂಸಿ ಆವರಣದಲ್ಲಿ ಮಂಗಳವಾರ ದಾಳಿ ನಡೆಸಿ ಮಾತನಾಡಿದರು. ಬಸ್ ನಿಲ್ದಾಣ ಹತ್ತಿರ ಕೆಲವು ಮಕ್ಕಳು ಭಿಕ್ಷೆ ಬೇಡುತ್ತಿರುವುದನ್ನು ಕಂಡು, ಅವರನ್ನು ವಶಕ್ಕೆ ಪಡೆದು ಪಾಲಕರ ಮಾಹಿತಿ ಪಡೆದುಕೊಳ್ಳಬೇಕು. ಮಕ್ಕಳನ್ನು ಶಾಲೆಗೆ ಕಳಿಸುವಂತೆ ತಾಕೀತು ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ಸಿಆರ್‌ಪಿಗಳಾದ ಶ್ರೀಧರ ದೇಸಾಯಿ, ಸೋಮಶೇಖರ್, ಉಪತಹಸೀಲ್ದಾರ್ ವಿನಾಯಕ್ ರಾವ್, ಕಾರ್ಮಿಕ ಅಧಿಕಾರಿ ಶಾಂತಮೂರ್ತಿ, ಪುರಸಭೆ ಅಧಿಕಾರಿ ಹಂಪಯ್ಯ ಇತರರು ಇದ್ದರು.