ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘವು ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ನಾಮಕರಣ-50ರ ಸಂಭ್ರಮ ನಿಮಿತ್ತ ಹಮ್ಮಿಕೊಂಡಿರುವ ಧರೆಗೆ ದೊಡ್ಡವರು ವಿಶೇಷ ಕಾರ್ಯಕ್ರಮದಡಿ ನ. 6ರಂದು ಬೆಳಗ್ಗೆ 10.30ಕ್ಕೆ ಶಿವಮೊಗ್ಗದ ಹಿರಿಯ ವ್ಯಾಕರಣ ತಜ್ಞ ಡಾ. ಡಿ.ಎನ. ಶಂಕರ ಭಟ್ ಬದುಕು ಮತ್ತು ಕೊಡುಗೆ ಕುರಿತು ವಿಚಾರ ಸಂಕಿರಣ ಜರುಗಲಿದೆ.
ಡಾ. ಡಿ.ಎನ. ಶಂಕರ ಭಟ್ ಬದುಕಿನ ಕುರಿತು ಬೆಂಗಳೂರಿನ ಡಾ. ಸಿ.ಪಿ. ನಾಗರಾಜ ಮತ್ತು ಕೊಡುಗೆ ಕುರಿತು ಶಿವಮೊಗ್ಗದ ಡಾ. ಮೇಟಿ ಮಲ್ಲಿಕಾರ್ಜುನ ಮಾತನಾಡುವರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ಡಾ. ಶೈಲಜಾ ಅಮರಶೆಟ್ಟಿ ಸಂಯೋಜನೆ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.