ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾಕ್ಲಿಯರ್ ಇಂಪ್ಲಾ೦ಟ್ ಶಸ್ತ್ರಚಿಕಿತ್ಸೆ ಕಿವಿ, ಮೂಗು ಮತ್ತು ಗಂಟಲು ಸಮಸ್ಯೆ ಎದುರಿಸುತ್ತಿರುವವರಿಗೆ ವರದಾನ. ಈ ಸಮಸ್ಯೆ ಇದ್ದವರು ಕಾಕ್ಲಿಯರ್ ಇಂಪ್ಲಾ೦ಟ್ ಶಸ್ತ್ರಚಿಕಿತ್ಸೆಯ ಮಹತ್ವ ಮತ್ತು ಅದರ ಉಪಯೋಗಗಳ ಬಗ್ಗೆ ತಿಳಿವಳಿಕೆ ಹೊಂದಬೇಕು ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರ0ಗಿ ಹೇಳಿದರು.
ನಗರದ ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠ, ವಾಕ್ ಮತ್ತು ಶ್ರವಣ ವಿದ್ಯಾಸಂಸ್ಥೆ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವಿ.ಡಿ. ಬೋಳಿಶೆಟ್ಟಿ ಮಾತನಾಡಿ, ವಿಜ್ಞಾನಕ್ಕೆ ಸಂಬ0ಧಪಟ್ಟ ಕಾರ್ಯಕ್ರಮಗಳಿಗೆ ಕೇಂದ್ರದಿ೦ದ ಸಂಪೂರ್ಣ ಬೆಂಬಲವಿರುತ್ತದೆ ಎಂದರು.
ಕಾಕ್ಲಿಯರ್ ಇಂಪ್ಲಾ೦ಟ್ ತಜ್ಞ ಡಾ. ಶಂಕರ ಮೆದಿಕೇರಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ಆಡಳಿತಾಽಕಾರಿ ಎಸ್.ಜಿ. ಬಿರಾದಾರ, ಪ್ರಾಚಾರ್ಯ ಡಾ. ಜಿಜೋ ಪಿ.ಎಂ., ಇಎನ್‌ಟಿ ತಜ್ಞ ಅನಿಕೇತ ಪಾಂಡುರ೦ಗಿ, ಇತರರಿದ್ದರು.
ಡಾ. ಆಶಾ ಎಥಿರಾಜ್, ಡಾ. ಮಂಜುಳಾ, ಡಾ. ರವೀಂದ್ರ ಗದಗ, ಡಾ. ರಶ್ಮಿ ದೇಶಪಾಂಡೆ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ರೋಶಿನಿ ಕೆ.ಕೆ. ನಿರೂಪಿಸಿದರು. ಪವನ ಕಟ್ಟಿ ವಂದಿಸಿದರು.