ಯಡಹಳ್ಳಿಯಲ್ಲಿ ನಡೆದ ಅಸ್ಪಶ್ಯತೆ ನಿರ್ಮೂಲನೆ ಕುರಿತ ವಿಚಾರಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಶೈರಾಬಾನು ನಧಾಪ ಮಾತನಾಡಿದರು. ಮಾಲಾ ಸಂ.ನಾಲತವಾಡ, ಎಂ.ಜಿ.ಬಿರಾದಾರ, ದ್ರಾಕ್ಷಾಯಿಣಿ ಪ.ಮಾದರ ಮತ್ತಿತರರಿದ್ದಾರೆ.  
ಜಿಲ್ಲೆ

ಅಸ್ಪೃಶ್ಯತೆ ನಿರ್ಮೂಲನಾ ವಿಚಾರಗೋಷ್ಠಿ

ವಿನಯ ಆಶೋಕ ನಾಯ್ಕ

ಕಲಾದಗಿ: ಸಮಾಜಕ್ಕೆ ಕಳಂಕವಾಗಿರುವ ಅಸ್ಪೃಶ್ಯತೆತೊಡೆದು ಹಾಕುವ ನಿಟ್ಟಿನಲ್ಲಿ ಅರಿವು ಮೂಡಿಸಲು ಸಮಾಜ ಕಲ್ಯಾಣ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ನೆರವಿನಿಂದ ಎಲ್ಲ ಗ್ರಾಮಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಎಲ್ಲರೂ ಭಾಗವಹಿಸುವ ಮೂಲಕ ಸಮಾನತೆಯ ಸಮಾಜ ಕಟ್ಟಲು ಶ್ರಮಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಶೈರಾಬಾನು ನಧಾಪ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸೂಳಿಕೇರಿಯ ಅನ್ನಪೂರ್ಣೆಶ್ವರಿ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸಮೀಪದ ಯಡಹಳ್ಳಿಯಲ್ಲಿ ಶನಿವಾರದಂದು ನಡೆದ ಅಸ್ಪಶ್ಯತೆ ನಿರ್ಮೂಲನೆ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬಾಗಲಕೋಟೆ ತಾಲೂಕು ಗ್ರೇಡ್-2 ತಹಸೀಲ್ದಾರ್ ಎಂ.ಜಿ. ಬಿರಾದಾರ ಮಾತನಾಡಿ, ಸಮಾಜದಲ್ಲಿರುವ ಅಸಮಾನತೆ ಹೋಗಲಾಡಿಸಲು ಹಿಂದುಳಿದವರನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮೇಲೆತ್ತಲು ಸರ್ಕಾರ ಅನೇಕ ಸೌಲಭ್ಯಗಳನ್ನು ರೂಪಿಸಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಮಾಲಾ ಸಂ.ನಾಲತವಾಡ, ಉಪಾಧ್ಯಕ್ಷೆ ದಾಕ್ಷಾಯಿಣಿ ಪ.ಮಾದರ, ಗ್ರಾಮಲೆಕ್ಕಾಧಿಕಾರಿ ರವಿ ಚಲವಾದಿ, ಕಾರ್ಯದರ್ಶಿ ಸಚಿನ ಸನ್ನಬಸಪ್ಪನವರ ಮತ್ತಿತರರಿದ್ದರು.

ನೂತನವಾಗಿ ನೇಮಕವಾಗಿರುವ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಹಿರೇಶೆಲ್ಲಿಕೇರಿಯ ಪಕೀರಪ್ಪ ಮಾದರ ಅವರನ್ನು ಗೌರವಿಸಲಾಯಿತು.