ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಜನಸಾಗರ ಸಾಹಿತ್ಯ- ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆಯಿ0ದ ಗಣರಾಜ್ಯೋತ್ಸವದ ಅಂಗವಾಗಿ ಜ. 19ರಂದು ಬೆಳಗ್ಗೆ 10 ಗಂಟೆಗೆ ಗರಗ ಕ್ರಾಸ್ ಬಳಿಯ ಕಾಲಮಹೇಶ್ವರ ಪುಣ್ಯಾಶ್ರಮದಲ್ಲಿ `ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರ' ವಿಷಯ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ. ಗ್ರಾಮದ ಆಧ್ಯಾತ್ಮಿಕ ಜ್ಞಾನ ಚಿಂತನ ಕೇಂದ್ರದ ಅಧ್ಯಕ್ಷ ಪುಂಡಲೀಕಪ್ಪ ಭಟ್ಟಂಗಿ ಅಧ್ಯಕ್ಷತೆ ವಹಿಸುವರು. ಹಾವೇರಿ ಜಿಲ್ಲಾ ಜಾನಪದ ಯುವ ಬ್ರಿಗೇಡ್‌ನ ಶಿವಯೋಗಿ ಹಾವೇರಿ ವಿಶೇಷ ಉಪನ್ಯಾಸ ನೀಡುವರು.