ಮದ್ದೂರು ಸಮೀಪದ ಸೋಮನಹಳ್ಳಿ ಎಸ್.ಸಿ.ಮಲ್ಲಯ್ಯ ವಿದ್ಯಾ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ರೈತ ಸಂಘದ ಹಿರಿಯ ರೈತ ಮುಖಂಡ ಅರಳಾಳುಸಂದ್ರ ಸಿ. ಪುಟ್ಟಸ್ವಾಮಿ ಮಾತನಾಡಿದರು. ವಿ.ಸಿ.ಉಮಾಶಂಕರ್, ಸೊ.ಸಿ.ಪ್ರಕಾಶ್, ಎಚ್.ಜಿ.ಪ್ರಭುಲಿಂಗ, ರಾಮಲಿಂಗ, ಕೆ.ಜಿ.ಉಮೇಶ್ ಇದ್ದರು.  
ಜಿಲ್ಲೆ

ನ. 8ರಂದು ಕೃಷಿ ಬಿಕ್ಕಟ್ಟು ವಿಚಾರ ಸಂಕಿರಣ

ಮದ್ದೂರು: ಸಮೀಪದ ಸೋಮನಹಳ್ಳಿ ಎಸ್.ಸಿ.ಮಲ್ಲಯ್ಯ ವಿದ್ಯಾ ಸಂಸ್ಥೆ ಆವರಣದಲ್ಲಿ ನ. 8ರಂದು ನಡೆಯುವ ಕೃಷಿ ಬಿಕ್ಕಟ್ಟು ವಿಚಾರ ಸಂಕಿರಣ ಯಶಸ್ವಿಗೊಳಿಸಬೇಕು ಎಂದು ರೈತ ಸಂಘದ ಹಿರಿಯ ರೈತ ಮುಖಂಡ ಅರಳಾಳುಸಂದ್ರ ಸಿ. ಪುಟ್ಟಸ್ವಾಮಿ ಮನವಿ ಮಾಡಿದರು.

ಶನಿವಾರ ಸೋಮನಹಳ್ಳಿ ಎಸ್.ಸಿ.ಮಲ್ಲಯ್ಯ ವಿದ್ಯಾ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೃಷಿ ಬಿಕ್ಕಟ್ಟು ವಿಚಾರ ಸಂಕಿರಣದಲ್ಲಿ ಅನೇಕ ವಿಚಾರಗಳು ಚರ್ಚೆಗೆ ಬರಲಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕೃಷಿಯಲ್ಲಿ ಭವಿಷ್ಯ ಇದೆಯಾ? ಪ್ರಸ್ತುತ ಕೃಷಿ ವಲಯಕ್ಕೆ ಆಗುತ್ತಿರುವ ಗಂಡಾಂತರಗಳು, ವಿಷ ಮಿಶ್ರಿತ ಆಹಾರ ಸೇವನೆ ಸೇರಿದಂತೆ ಅನೇಕ ವಿಚಾರಗಳ ಚರ್ಚೆ ಮತ್ತು ಪರಿಹಾರ ಕಂಡುಕೊಳ್ಳಲು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದರು.

ಹಿರಿಯ ಹೋರಾಟಗಾರರು, ನುರಿತ ಕೃಷಿ ಪರಿಣಿತ ತಜ್ಞರು, ಕೃಷಿ ವಲಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸಲು ಹಾಗೂ ಆ ಕುರಿತು ಹೊಸ ತಲೆಮಾರಿಗೆ ಅರಿವು ಮೂಡಿಸಲು ಈ ವೇದಿಕೆ ಸೂಕ್ತವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೈಸೂರು, ಚಾಮರಾಜನಗರ ಮಂಡ್ಯ ಸೇರಿದಂತೆ ಹಲವಾರು ಜಿಲ್ಲೆಗಳ ರೈತರು ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ. ತಾಲೂಕಿನ ರೈತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಮಾರ್ಗದರ್ಶಕ ನ.ಲಿ.ಕೃಷ್ಣ, ರೈತ ಮುಖಂಡರಾದ ಸೊ.ಸಿ.ಪ್ರಕಾಶ್, ಎಚ್.ಜಿ.ಪ್ರಭುಲಿಂಗ, ರಾಮಲಿಂಗ, ಕೆ.ಜಿ.ಉಮೇಶ್, ಹಲ್ಲೆಗೆರೆ ಶಿವರಾಮು, ಬನ್ನೂರು ನಾರಾಯಣ, ಶಿವರಾಮು, ಬೋರಲಿಂಗಯ್ಯ, ನಾಗಮಂಗಲ ಸುರೇಶ್, ಬೋರೇಗೌಡ, ಕೀಳಘಟ್ಟ ನಂಜುಂಡಯ್ಯ, ಶಿವಲಿಂಗಯ್ಯ, ಪಣ್ಣೆದೊಡ್ಡಿ ವೆಂಕಟೇಶ್, ಬಿಳಿಯಪ್ಪ ಇದ್ದರು.