ಜಿಲ್ಲೆ

Police ಕಾರ್ಯಾಚರಣೆ ಗಾಂಜಾ ಮಾರುತ್ತಿದ್ದ 3 ಜನರ ಬಂಧನ

Uttara Kannada - Subash Hegde

ಭಟ್ಕಳ:  ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಭಟ್ಕಳ ಪೊಲೀಸರು ಗುರುವಾರ ಬಂಧಿಸಿದ್ದಾರೆ.   ಶಹರ (Police) ಪೊಲೀಸ್ ಠಾಣಾ ವ್ಯಾಪ್ತಿಯ ಸಾಗರ ರೋಡ್ ಅಂಜುಮನ್ ಕಾಲೇಜ್ ಸಮೀಪ ಇರುವ ವಾಟರ್ ಟ್ಯಾಂಕ್ ಹತ್ತಿರ ಕಾರಿನಲ್ಲಿ ಗಾಂಜಾ ಮಾದಕ ಪದಾರ್ಥ ಮಾರಾಟ ಮಾಡುತ್ತಿದ್ದಾಗ ಪೊಲೀಸರು ಬಲೆ ಬೀಸಿದ್ದಾರೆ.

ಮಗ್ದುಂ ಕಾಲೋನಿಯ ಮೊಹಮ್ಮದ ಜೀಯಾಮ್  ಸಿರಾಜುಲ್ ಹಸನ್, ನೌಮಾನ ಮೌಲಾ ಶೇಖ್‌, ಮೊಹಮ್ಮದ ಫರ್ಹಾನ  ಮೊಹಮ್ಮದ ಇರ್ಷಾದ್ , ಬಂದರು ಬೇಳ್ನಿಯ  ನಸರುದ್ದೀನ ಶೇಖ್‌ ಬಂಧಿತರು. ಅವರಿಂದ 15000  ರೂ. ಮೌಲ್ಯದ 370 ಗ್ರಾಂ  ಗಾಂಜಾ 3000 ರೂ.ಮೌಲ್ಯದ MDMA (methamphetamine) ಹಾಗೂ ಇತರೇ ಸಲಕರಣೆಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪಿಎಸ್‌ಐ ನವೀ ನ್ ನಾಯ್ಕ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.