ಜಿಲ್ಲೆ

ಗಾಂಜಾ ಮಾರಾಟಕ್ಕೆ ಯತ್ನ, ಇಬ್ಬರು ವಶ

ಸುಭಾಸ ಹೆಗಡೆ ಧೂಪದಹೊಂಡ

ಶಿರಸಿ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಇಲ್ಲಿನ ಮಾರುಕಟ್ಟೆ ಠಾಣೆಯ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.

ಇಲ್ಲಿಯ ಕಸ್ತೂರಬಾ ನಗರದ ಕೆರೆಗುಂಡಿ ರಸ್ತೆಯ ಪಕ್ಕದ ಖುಲ್ಲಾ ಜಾಗದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಆರೋಪಿಗಳಾದ ಆಸಿಫ್ ಅಬ್ದುಲ್ ಶೇಖ್ ಹಾಗೂ ಜಾಫರ ಗೌಸ್ ಮದಿನ್ ಹಾನಗಲ್​ನನ್ನು ವಶಕ್ಕೆ ಪಡೆದುಕೊಂಡು 4 ಸಾವಿರ ರೂ. ಮೌಲ್ಯದ 135 ಗ್ರಾಂ ಗಾಂಜಾ ಹಾಗೂ 1 ಬೈಕ್, 1500 ರೂ. ನಗದು, 2 ಮೊಬೈಲ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರುಕಟ್ಟೆ ಠಾಣೆಯ ಪಿಎಸ್​ಐ ನಾಗಪ್ಪ ನೇತೃತ್ವದಲ್ಲಿ ಪಿಎಸ್​ಐ ನಾಗೇಂದ್ರ ನಾಯ್ಕ, ಸಿಬ್ಬಂದಿ ಪ್ರಶಾಂತ ಪವಾಸ್ಕರ, ಚಿದಾನಂದ ನಾಯ್ಕ, ಇಸ್ಮಾಯಿಲ್ ಕೋಣನಕೇರಿ, ರಾಮಯ್ಯ , ಮೋಹನ ನಾಯ್ಕ, ಹನುಮಂತ ಮಾಕಾಪುರ ಕಾರ್ಯಾಚರಣೆಯಲ್ಲಿದ್ದರು.