ಮೈಸೂರು: ಪೂಮಾ ಬ್ರಾಂಡ್ ಬಳಸಿ ನಕಲಿ ಶೂಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆಯ ಮೇಲೆ ದಾಳಿ ನಡೆಸಿರುವ ಕಂಪನಿ ಅಧಿಕಾರಿಗಳು ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಗರದ ಬೋಗಾದಿಯ ಕಾಂಪ್ಲೆಕ್ಸ್ ಒಂದರಲ್ಲಿ ಪೂಮಾ ಕಂಪನಿಯ ಹೆಸರು ಹಾಗೂ ಲೋಗೋವನ್ನು ಬಳಸಿಕೊಂಡು ನಕಲಿ ಶೂಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಕಂಪನಿಗೆ ಬಂದಿದೆ.
ಈ ಸಂಬಂದ ಕಂಪನಿಯ ವ್ಯವಸ್ಥಾಪಕ ಬಿ.ತಿಯಾಗು ಎಂಬವರು ಜ.24 ರಂದು ಮೈಸೂರಿಗೆ ಬಂದು ಬೋಗಾದಿಯ ಮಳಿಗೆಯನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಲ್ಲಿ ಪೂಮಾ ಎಂಬ ನಕಲಿ ಶೂಗಳು ಪತ್ತೆಯಾಗಿವೆ. ಈ ಸಂಬಂಧ ಅವರು ಅಂಗಡಿ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದಾರೆ.