ಜಿಲ್ಲೆ

ಬೆನಕ ಗೋಲ್ಡ್ ಕಂಪನಿಯಲ್ಲಿ ಸೆಲ್ ಆ್ಯಂಡ್ ಸೇವ್ ಆರ್; ಮಾರಾಟದ ನಂತರ ಮರಳಿ ಪಡೆಯಲು ಅವಕಾಶ

ಬೆಂಗಳೂರು: ಬಂಗಾರದ ಮೇಲಿನ ಹೂಡಿಕೆ, ಮಾರಾಟ, ಗಿರವಿ ಇವೆಲ್ಲವೂ ಸಾಮಾನ್ಯ. ಆದರೆ ಕಷ್ಟಕಾಲದಲ್ಲಿ ಮಾರಾಟ ಮಾಡಿದ ಬಂಗಾರವನ್ನು ಕಷ್ಟ ಕಳೆದ ನಂತರ ಮರಳಿ ಪಡೆಯುವ ವಿನೂತನ ಯೋಜನೆಯನ್ನು ಇದೇ ಮೊದಲ ಬಾರಿಗೆ ಬೆನಕ ಗೋಲ್ಡ್ ಕಂಪನಿ ಗ್ರಾಹಕರಿಗೆ ಪರಿಚಯಿಸಿದೆ. ಬಂಗಾರವನ್ನು ಖರೀದಿಸಿದವರು ತಮ್ಮ ಕಷ್ಟದ ಸಂದರ್ಭದಲ್ಲಿ ಅದನ್ನು ಮಾರಾಟ ಮಾಡುತ್ತಾರೆ. ಹೀಗೆ ಮಾರಾಟ ಮಾಡುವಾಗ ಭಾವನಾತ್ಮಕವಾಗಿ ನೋವು ಅನುಭವಿಸುತ್ತಾರೆ. ಅಂತಹವರ ಭಾವನೆಗಳನ್ನು ಗೌರವಿಸಿ ಮಾರಾಟ ಮಾಡಿದ ಬಂಗಾರವನ್ನು ಮರಳಿ ನೀಡುವ ವಿಶೇಷ ಪರಿಕಲ್ಪನೆಯನ್ನು ಬೆನಕ ಗೋಲ್ಡ್ ಕಂಪನಿ ಸಂಸ್ಥಾಪಕ ಎಸ್.ಭರತ್ ಕುಮಾರ್ ೋಷಿಸಿದ್ದಾರೆ. ಭಾರತೀಯ ಸುವರ್ಣ ಮಾರುಕಟ್ಟೆಯ ಇತಿಹಾಸದಲ್ಲಿ ವಿಭಿನ್ನ ಮತ್ತು ಪ್ರಥಮ ಪ್ರಯತ್ನ ಎಂದು ಸಂಸ್ಥೆ ಹೇಳಿಕೊಂಡಿದೆ. ಬಂಗಾರದಲ್ಲಿ ಹೊಸ ಬಂಗಾರ ಎಂಬ ಪರಿಕಲ್ಪನೆ ಇಲ್ಲ. ಹೊಸ ಆಭರಣ ಮಾತ್ರ ಸಿಕ್ಕುತ್ತದೆ. ಕಾರಣ ಖರೀದಿ ಮಾಡಿದ ಹಳೇ ಬಂಗಾರವನ್ನೇ ಕರಗಿಸಿ 999 ಪ್ಯೂರಿಟಿಯಲ್ಲಿ ಬಿಸ್ಕೆಟ್ ತಯಾರಿಸಿ ಅದರಿಂದ ಹೊಸ ಆಭರಣವನ್ನು ತಯಾರಿಸುತ್ತಾರೆ. ಹೀಗೆ ಮಾಡುವ ಪ್ರಕ್ರಿಯೆಯಿಂದ ಬಂಗಾರದ ಬೆಲೆ ಪ್ರತಿ ಬಾರಿಯೂ ಹೆಚ್ಚಾಗುತ್ತದೆ. ಆದ್ದರಿಂದ ಕಷ್ಟ ಬಂದಾಗ ಬಂಗಾರ ಮಾರಾಟ ಮಾಡಿ ನಂತರ ಹೊಸದಾಗಿ ಖರೀದಿಸಬೇಕೆಂದರೆ ಶೇ.35ರಷ್ಟು ಹೆಚ್ಚಿಗೆ ಹಣವನ್ನು ಪಾವತಿಸಬೇಕಾಗುತ್ತದೆ. ಆದರೆ ಬೆನಕ ಗೋಲ್ಡ್ ಕಂಪನಿಯ ಹೊಸ ಯೋಜನೆಯಿಂದ ಆ ಹಣ ಉಳಿತಾಯವಾಗುತ್ತದೆ.

5 ವರ್ಷ ಪೂರೈಸಿದ ಬೆನಕ ಗೋಲ್ಡ್

35 ಶಾಖೆಗಳನ್ನು ಹೊಂದಿರುವ ಬೆನಕ ಗೋಲ್ಡ್ ಕಂಪನಿ ತನ್ನ 6ನೇ ವಾರ್ಷಿಕೋತ್ಸವವನ್ನು ಸೋಮವಾರ ಪ್ರೆಸ್ ಕ್ಲಬ್‌ನಲ್ಲಿ ಆಚರಿಸಿಕೊಂಡಿತು. ಈ ಹಿಂದೆ ಸ್ಟೋನ್ ಾರ್ ವ್ಯಾಲ್ಯೂ, ರೆಂಟ್ ಾರ್ ಗೋಲ್ಡ್ ಇತ್ಯಾದಿ ಜನಪ್ರಿಯ ಸ್ಕೀಮ್‌ಗಳಿಂದ ಗ್ರಾಹಕರ ಗಮನ ಸೆಳೆದಿರುವ ಬೆನಕ ಗೋಲ್ಡ್ 6ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗೋಲ್ಡ್ ಪೀರಿಯಡ್ ಸ್ಕೀಂ ಆರ್ ೋಷಿಸಿದೆ.ನಟಿ ರೀಷ್ಮಾ ನಾಣಯ್ಯ ಬೆನಕ ಗೋಲ್ಡ್ ಕಂಪನಿಯ ನೂತನ ರಾಯಭಾರಿಯಾಗಿ ಆಯ್ಕೆಯಾಗಿದ್ದು, ಹೊಸ ಜಾಹೀರಾತುಗಳಲ್ಲಿ ಮಿಂಚಲಿದ್ದಾರೆ. ಇದೇ ವೇಳೆ ಕಂಪನಿಯ ಅಪ್‌ಡೇಟೆಡ್ ವೆಬ್‌ಸೈಟ್ ಲಾಂಚ್ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಿಓಓ ನಾಗರಾಜನ್, ಬಾಲನಟಿ ಪ್ರತಿ ಶೆಟ್ಟಿ ಪಾಲ್ಗೊಂಡಿದ್ದರು.

2020ರಲ್ಲಿ ಸ್ಥಾಪನೆಗೊಂಡಿರುವ ಬೆನಕ ಗೋಲ್ಡ್ ಕಂಪನಿಯ ಯಶಸ್ಸಿನ ಹಿಂದೆ 15 ವರ್ಷಗಳ ಪರಿಶ್ರಮವಿದೆ. ಗೋಲ್ಡ್ ಕಂಪನಿಗಳು ಬಂಗಾರವನ್ನು ಮಾರಾಟ ಮಾಡುವಂತೆ ಪ್ರೇರಿಪಿಸುತ್ತಿವೆ. ಆದರೆ ನಮ್ಮ ಕಂಪನಿ ನಿಮ್ಮ ಬಂಗಾರವನ್ನು ಉಳಿಸುವುದಕ್ಕೆ ಹೆಚ್ಚು ಗಮನ ನೀಡುತ್ತಿದೆ. ಈ ಯೋಜನೆಯನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು. - ಎಸ್.ಭರತ್ ಕುಮಾರ್, ಬೆನಕ ಗೋಲ್ಡ್ ಸಂಸ್ಥಾಪಕ
ಬೆನಕ ಗೋಲ್ಡ್ ಕಂಪನಿ ಗ್ರಾಹಕರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುತ್ತಿದೆ. ಗ್ರಾಹಕರನ್ನು ದಾರಿ ತಪ್ಪಿಸದೇ ಅವರಿಗೆ ಸರಿಯಾದ ಸಲಹೆ ನೀಡಿ ಕಷ್ಟಕಾಲದಲ್ಲಿ ಸಹಾಯ ಮಾಡುತ್ತಿರುವುದರಿಂದ ಕಂಪನಿಯ ರಾಯಬಾರಿಯಾಗಲು ಒಪ್ಪಿಕೊಂಡಿದ್ದೇನೆ. -ರೀಷ್ಮಾ ನಾಣಯ್ಯ, ರಾಯಭಾರಿ