ಜಿಲ್ಲೆ

ನಿಸ್ವಾರ್ಥ ಸೇವಾ ಕಾರ್ಯ ಅನುಕರಣೀಯ

Avinash R

ಬಂಟ್ವಾಳ: ಸ್ವಸ್ಥ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ತನ್ನ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಸಮಾಜದ ಜನರ ನಿಸ್ವಾರ್ಥ ಸೇವೆ ಮಾಡುತ್ತಿರುವ ಕೃಷ್ಣ ಕುಮಾರ್ ಪೂಂಜ ಅವರ ಸೇವಾ ಕಾರ್ಯ ಅನುಕರಣೀಯ ಎಂದು ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್ ಹೇಳಿದರು.

ಕೇಂದ್ರ ಸರ್ಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಕ್ಷಯರೋಗಿಗಳಿಗೆ ದವಸಧಾನ್ಯಗಳ ಆಹಾರ ಕಿಟ್ ವಿತರಿಸಿ ಮಾತನಾಡಿದರು.

ಬಂಟ್ವಾಳ ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಬಿ.ಪ್ರಕಾಶ್ ಬಾಳಿಗ ಮಾತನಾಡಿ, ಸೇವಾಂಜಲಿ ಸಂಸ್ಥೆ ಮಿನಿ ಆಸ್ಪತ್ರೆಯಂತೆ ಕೆಲಸ ನಿರ್ವಹಿಸುತ್ತಿದೆ. ರೋಟರಿ ಕ್ಲಬ್ ಬಂಟ್ವಾಳ ಹಾಗೂ ಸೇವಾಂಜಲಿ ಸಂಸ್ಥೆ ಸೇವಾ ಕಾರ್ಯದಲ್ಲಿ ಅವಿನಾಭಾವ ಸಂಬಂಧ ಇಟ್ಟುಕೊಂಡಿದೆ ಎಂದರು.

ಸೇವಾಂಜಲಿ ಟ್ರಸ್ಟಿ ಪದ್ಮನಾಭ ಶೆಟ್ಟಿ ಪುಂಚಮೆ, ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು, ಪ್ರಮುಖರಾದ ಕೃಷ್ಣ ತುಪ್ಪೆಕಲ್ಲು, ಪ್ರಶಾಂತ್ ತುಂಬೆ, ವಿಕ್ರಂ ಬರ್ಕೆ, ಸುರೇಶ್ ರೈ ಪೆಲಪಾಡಿ, ಭಾಸ್ಕರ ಚೌಟ, ಆರ್.ಎಸ್.ಜಯ, ದಿನೇಶ್ ತುಂಬೆ, ಸುಕುಮಾರ್ ಅರ್ಕುಳ, ಆನಂದ ಆಳ್ವ ಗರೋಡಿ, ನಾರಾಯಣ ಬಡ್ಡೂರು, ಮೋಹನ್ ಬೆಂಜನಪದವು, ಪದ್ಮನಾಭ ಕಿದೆಬೆಟ್ಟು ಉಪಸ್ಥಿತರಿದ್ದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿ ಕೊಡ್ಮಾಣ್ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.