ಜಿಲ್ಲೆ

ನಿಸ್ವಾರ್ಥ ಭಾವದಿಂದ ಜನ ಸೇವೆ : ನಾರಾಯಣರಾವ್ ಅನಿಸಿಕೆ ಶ್ಲಾಘನೆ ರಾಜ ಕೇಸರಿ ಸಂಘಟನೆ ನೇತ್ರ ಶಿಬಿರ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಮತ್ತು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ಮತ್ತು ಶ್ರೀದೇವಿ ಅಪ್ಪಿಕಲ್ಸ್ ಬೆಳ್ತಂಗಡಿ ಸಂಯುಕ್ತ ಆಶ್ರಯದಲ್ಲಿ, ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ.ಬೆಳ್ತಂಗಡಿ ನೇತೃತ್ವದಲ್ಲಿ, 551ನೇ ಸೇವಾ ಯೋಜನೆಯಾಗಿ ಬೃಹತ್ ನೇತ್ರ ತಪಾಸಣೆ ಉಚಿತ ಶಿಬಿರ ಮುಗುಳಿ ದ.ಕ.ಜಿ.ಹಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆಯಿತು.

ರಾಜ ಕೇಸರಿ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸಂದೀಪ್ ಬೆಳ್ತಂಗಡಿ ಅಧ್ಯಕ್ಷತೆ ವಹಿಸಿದ್ದರು. ರಾಜ ಕೇಸರಿ ಜಿಲ್ಲಾಧ್ಯಕ್ಷ ಸಂತೋಷ್ ಕೊಲ್ಯ ಉದ್ಘಾಟಿಸಿ, ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ.ಬೆಳ್ತಂಗಡಿ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾದಾದ್ಯಂತ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲು ತಯಾರಿದ್ದೇವೆ ಎಂದರು.

ಮುಗಳಿ ನಾರಾಯಣರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ ಕೇಸರಿ ರಾಜ್ಯಾದ್ಯಂತ ನಿಸ್ವಾರ್ಥ ಸೇವೆ ಮೂಲಕ ರಾಜ್ಯದಲ್ಲಿ ಮನೆ ಮಾತಾಗಿದೆ. ಇನ್ನು ಮುಂದೆ ದೇಶಾದ್ಯಂತ ಸಂಘಟನೆಯನ್ನು ವಿಸ್ತರಿಸಿ ಬೆಳ್ತಂಗಡಿ ತಾಲೂಕಿಗೆ ಹೆಸರು ತಂದು ಕೊಡುವಂತಾಗಲಿ ಎಂದರು.

ಶ್ರೀದೇವಿ ಅಪ್ಪಿಕಲ್ಸ್ ಸಂತೆಕಟ್ಟೆ ಮಾಲಕಿ ಮಂಜುಳಾ, ಜೆಪಿ ಅಟ್ಟಾಕರ್ಸ್ ಬುಟ್ಟುಗುಡ್ಡೆ ಅಧ್ಯಕ್ಷ ಕರುಣಾಕರ ಬಂಗೇರ, ಮುಗುಳಿ ಶಾಲಾ ಮುಖ್ಯಶಿಕ್ಷಕಿ ಲೂಸಿ ಲೀನಾ ಮೋರಸ್, ರಾಜ ಕೇಸರಿ ಜಿಲ್ಲಾ ಸಂಚಾಲಕ ಪ್ರಸಾದ್ ಕುಲಾಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹರೀಶ್ ಕುಮಾರ್ ಶೆಟ್ಟಿ, ಬಂಟ್ವಾಳ ತಾಲೂಕು ರಾಜ ಕೇಸರಿ ಆಧ್ಯಕ್ಷ ಗೌತಮ್ ಪೂಜಾರಿ ನೆಲ್ಲಿಗುಡ್ಡೆ, ಸಂಚಾಲಕ ರಮೇಶ್ ನಾಯ್ಕ, ಕೆ.ಸಿ.ಬೆಳ್ತಂಗಡಿ ಇದರ ಮಾಲೀಕ ದೇವರಾಜ್ ಉಪಸ್ಥಿತರಿದ್ದರು.

ನೂರಕ್ಕಿಂತ ಅಧಿಕ ಶಿಬಿರದ ಪ್ರಯೋಜನ ಪಡೆದುಕೊಂಡರು. ಸಂತೋಷ್ ಉಜಿರೆ ನಿರೂಪಿಸಿದರು. ಪ್ರಶಾಂತ್ ಗುರುವಾಯನಕೆರೆ ಸ್ವಾಗತಿಸಿ ಅಧ್ಯಕ್ಷ ಸಂದೀಪ್ ಬೆಳ್ತಂಗಡಿ ವಂದಿಸಿದರು.