ಗಂಗಾವತಿ ಸರ್ಕಾರಿ ಐಟಿಐ ಕಾಲೇಜಿನಲ್ಲಿ ರೋಟರಿ ಕ್ಲಬ್ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಸ್ವಯಂ ಉದ್ಯೋಗ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಕ್ಲಬ್ ತಾಲೂಕು ಅಧಕ್ಷ ಟಿ.ಆಂಜನೇಯ ಶನಿವಾರ ಮಾತನಾಡಿದರು. ಕ್ಲಬ್ ಕಾರ್ಯದರ್ಶಿ ವಾಸುಕೊಳಗದ್, ಆರ್ಥಿಕ ಮತ್ತು ಸಮುದಾಯ ಅಭಿವದ್ಧಿ ವಿಭಾಗದ ಮುಖ್ಯಸ್ಥ ಎ.ಜಗದೀಶ, ಪ್ರಾಚಾರ್ಯ ಡಿ.ಕೊಟ್ರೇಶ, ಉಪನ್ಯಾಸಕರಾದ ಪಾಪಣ್ಣ, ಮಧುಸೂದನ, ಮೊಹಮ್ಮದ್ ರಫಿ ಇತರರಿದ್ದರು. 
ಜಿಲ್ಲೆ

ಸ್ವ ಉದ್ಯೋಗದೊಂದಿಗೆ ಸ್ವಾವಲಂಬಿಗಳಾಗಿ

ರುದ್ರಪ್ಪ ವಾಲಿ

ಗಂಗಾವತಿ: ಕೃಷಿ ಪ್ರಧಾನ ದೇಶದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದ್ದು, ಸ್ವಯಂ ಉದ್ಯೋಗದತ್ತ ಗಮನಹರಿಸಿ ಎಂದು ರೋಟರಿ ಸಂಸ್ಥೆ ತಾಲೂಕು ಅಧ್ಯಕ್ಷ ಟಿ.ಆಂಜನೇಯ ಹೇಳಿದರು.

ನಗರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ರೋಟರಿ ಕ್ಲಬ್ ತಾಲೂಕು ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಸ್ವಯಂ ಉದ್ಯೋಗ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಅತಿಯಾಗಿದ್ದು, ಎಲ್ಲರಿಗೂ ಸರ್ಕಾರಿ ನೌಕರಿ ದೊರೆಯುವುದು ಅಸಾಧ್ಯ. ವತ್ತಿ ಪರ ವಿಷಯದಲ್ಲಿ ಅಭ್ಯಾಸ ಮಾಡಿದವರಿಗೆ ಸ್ವ ಉದ್ಯೋಗಕ್ಕೆ ಹಲವು ಅವಕಾಶಗಳಿದ್ದು, ಸರ್ಕಾರಿ ಸೌಲಭ್ಯ ಮತ್ತು ಯೋಜನೆಗಳ ಮಾಹಿತಿ ಪಡೆಯಬೇಕು. ಸ್ವಾವಲಂಬಿ ಬದುಕಿಗೆ ಸ್ವಯಂ ಉದ್ಯೋಗ ಮುಖ್ಯ ಎಂದರು.

ಕಾಲೇಜು ಪ್ರಾಚಾರ್ಯ ಡಿ. ಕೊಟ್ರೇಶ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ ರೋಟರಿ ಸಂಸ್ಥೆ ಶೈಕ್ಷಣಿಕ ಅಭಿವೃದ್ಧಿಗೂ ಆದ್ಯತೆ ನೀಡಿದೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳುತ್ತಿರುವುದು ಪ್ರಶಂಸನೀಯ ಎಂದರು.