ಸಂಡೂರು ತಾಲೂಕು ಯಶವಂತನಗರದಲ್ಲಿ ಆರ್‌ಸಿಪಿಎಲ್‌ನಿಂದ 40 ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ತರಬೇತಿ ಶಿಬಿರಕ್ಕೆ ಶನಿವಾರ ಚಾಲನೆ ನೀಡಲಾಯಿತು. ವಿರಕ್ತಮಠದ ಶ್ರೀಸಿದ್ದರಾಮೇಶ್ವರ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ವೀಣಾ ಪರಶುರಾಮ, ಉಪಾಧ್ಯಕ್ಷ ಯೂಸ್ೂ ಇತರರಿದ್ದರು. 
ಜಿಲ್ಲೆ

ಸ್ವಾವಲಂಬಿಗಳಾಗಿ ಬದುಕಲು ಮುಕ್ತ ಅವಕಾಶ

ರುದ್ರಪ್ಪ ವಾಲಿ

ಸಂಡೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷ ಕಳೆದರೂ ಹೆಣ್ಣುಮಕ್ಕಳು ಮುಕ್ತವಾಗಿ ಓಡಾಡದಂತಹ ಸ್ಥಿತಿ ಇದೆ. ಜಪಾನ್‌ನಂತೆ ಭಾರತ ಮುಂದುವರಿಯಲು ಮಹಿಳೆಯರು ದಿಟ್ಟ ಹೆಜ್ಜೆ ಇಡಬೇಕು ಎಂದು ತಾಲೂಕಿನ ಯಶವಂತನಗರ ಮಠದ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಯಶವಂತನಗರದ ಆರ್‌ಪಿಸಿಎಲ್‌ನಿಂದ 40ಜನ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ತರಬೇತಿ ಶಿಬಿರ ಶನಿವಾರ ಉದ್ಘಾಟಿಸಿ ಮಾತನಾಡಿದರು.

ತರಬೇತಿ ಶಿಬಿರ

ಆರ್‌ಪಿಸಿಎಲ್ ಕಂಪನಿವತಿಯಿಂದ ಮಹಿಳೆಯರಿಗೆ 6 ತಿಂಗಳ ಕಾಲ ಉಚಿತವಾಗಿ ಹೊಲಿಗೆ ತರಬೇತಿ ಶಿಬಿರ
ನೀಡುತ್ತಿದ್ದು ಸ್ವಾವಲಂಬಿಗಳಾಗಿ ಬದುಕಲು ಮುಕ್ತ ಅವಕಾಶ ನೀಡಿದೆ ಎಂದರು.

ಗ್ರಾಪಂ ಅಧ್ಯಕ್ಷೆ ವೀಣಾ ಪರಶುರಾಮಪ್ಪ ಮಾತನಾಡಿ, ಈಗಾಗಲೆ ಧರ್ಮಾಪುರ ಗ್ರಾಮದಲ್ಲಿ 50ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಅದೇರೀತಿ ನಮ್ಮ ಗ್ರಾಮದಲ್ಲೂ ಮಹಿಳೆಯರಿಗೆ ತರಬೇತಿ ನೀಡುತ್ತಿರುವುದು ಶುಭ ಸೂಚನೆ ಎಂದರು.

ಗ್ರಾಪಂ ಉಪಾಧ್ಯಕ್ಷ ಯೂಸೂಫ್, ತಾಪಂ ಮಾಜಿ ಉಪಾಧ್ಯಕ್ಷ ಮಲಿಯಪ್ಪ, ಆರ್‌ಪಿಸಿಎಲ್ ಅಧಿಕಾರಿಗಳಾದ ಆರ್.ರಮೇಶ್, ರಾಜಶೇಖರ್ ಬೆಲ್ಲದ, ನರೇಂದ್ರಬಾಬು ಮಾತನಾಡಿದರು.

ಹಾಲಿ ಗ್ರಾಪಂ ಸದಸ್ಯರಾದ ಸುರೇಶ, ಶಹಜಾದಿಬೇಗಂ, ಬುಡ್ಡೇನ್ ಸಾಬ್, ಎಚ್.ತಿಪ್ಪೇಸ್ವಾಮಿ, ಮುಖಂಡರಾದ ರಾಜಾಭಕ್ಷಿ, ಅಬ್ದುಲ್‌ನಬಿ, ಬಷೀರ್, ಎನ್.ತಿಪ್ಪೇಸ್ವಾಮಿ, ಕೆ.ಪ್ರಕಾಶ, ಓಬಳೇಶಪ್ಪ, ಸೋವೇನಹಳ್ಳಿ ಶಿವಮೂರ್ತಿ ಸ್ವಾಮಿ ಇತರರಿದ್ದರು. ಬಿಕೆಜಿ ಕಂಪನಿ ಎಚ್‌ಆರ್ ವಿಭಾಗ ಗೋಪಾಲ ನಿರ್ವಹಿಸಿದರು.