ಕವಿತಾಳ: ರೆಡ್‌ಕ್ರಾಸ್ ಕಾರ್ಯಕ್ರಮಗಳು ಜನಪರವಾಗಿವೆ ಎಂದು ಸಂಸ್ಥೆಯ ತಾಲೂಕು ಕಾರ್ಯದರ್ಶಿ ಡಾ.ಮಹಿಬೂಬ್ ಮದ್ಲಾಪುರ ಹೇಳಿದರು.
ಪಟ್ಟಣದ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರೆಡ್‌ಕ್ರಾಸ್ ಮಾಹಿತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಸಹಕಾರದೊಂದಿಗೆ ಜೀವನ ನಡೆಸಬೇಕು.
ಮಾನವೀಯತೆಯೊಂದಿಗೆ ಸೇವೆ ಮಾಡಬೇಕು. ಸ್ವಯಂಸೇವೆಯಿಂದ ಜೀವನ ಅರ್ಥಪೂರ್ಣವಾಗುತ್ತದೆ. ಬಾಹ್ಯವಾಗಿ ಯಾರಿಂದಲೂ ತಯಾರಿಸಲಾಗದ ಜೀವದ್ರವ್ಯ ರಕ್ತ ಆಗಿದ್ದು, ಮತ್ತೊಬ್ಬರ ಜೀವ ಉಳಿಸುವ ಅವಕಾಶ ಬಂದಾಗ ದಾನ ಮಾಡಬೇಕು ಎಂದರು.
ಪ್ರಾಚಾರ್ಯ ಡಾ.ರವಿಚಂದ್ರ, ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಅತ್ತಾವುಲ್ಲಾ, ಉಪನ್ಯಾಸಕರಾದ ಬಸವರಾಜ, ರವಿಕುಮಾರ, ವಿಶ್ವನಾಥ, ನಾಗರಾಜ, ದೇವರಾಜ, ತಿಪ್ಪಯ್ಯ, ಸಲೀಮ್‌ಸಾಬ್ ಇದ್ದರು.