ಕಾಗವಾಡ: ಸ್ವಾಭಿಮಾನಿ ಶೇತಕರಿ ಸಂಟನೆಯ ಸಂಸ್ಥಾಪಕ ರಾಜು ಶೆಟ್ಟಿ ಉದ್ಘಾಟನೆ ಮಾಡಿರುವ ಸ್ವಾಭಿಮಾನಿ ಸೊಸೈಟಿಯು ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ಪ್ರಸಕ್ತ ಆರ್ಥಿಕ ಸಾಲಿನಲ್ಲಿ ರೂ. 43.58 ಲ ನಿವ್ವಳ ಲಾಭ ಗಳಿಸಿದೆ ಎಂದು ಸೊಸೈಟಿ ಅಧ್ಯಕ್ಪ ರಾಜೇಂದ್ರ ಚೌಗುಲಾ ತಿಳಿಸಿದ್ದಾರೆ.
ಸಮೀಪದ ಶಿರಗುಪ್ಪಿ ಗ್ರಾಮದ ಜೆನ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸೊಸೈಟಿಯ 7ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸೊಸೆಟಿ 2 ಶಾಖೆ, 836 ಸದಸ್ಯರು, 8.41 ಲ ರೂ. ಷೇರು ಬಂಡವಾಳ, 15.17 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. 8.55 ಕೋಟಿ ರೂ. ಸಾಲ ವಿತರಿಸಿ, 43.57 ಲ ರೂ. ನಿವ್ವಳ ಲಾಭ ಗಳಿಸಿದೆ ಎಂದರು.
ಉಪಾಧ್ಯ ಭೀಮು ಅಕಿವಾಟೆ ಸದಸ್ಯರಿಗೆ ಶೇ. 25ರಷ್ಟು ಲಾಭಾಂಶ ೂಷಣೆ ಮಾಡಿದರು. ಮುಖ್ಯ ಕಾರ್ಯದರ್ಶಿ ರಾಕೇಶ ಅಕಿವಾಟೆ ವರದಿ ಓದಿದರು.
ಮುಖಂಡ ಸುರೇಶ ಚೌಗುಲೆ ಮಾತನಾಡಿ, ಸೊಸೆಟಿ ಇನಷ್ಟು ಶಾಖೆ ಪ್ರಾರಂಭಿಸಲಿ ಎಂದು ಹಾರೆಸಿದರು. ನಿರ್ದೇಶಕರಾದ ಪ್ರಕಾಶ ಹೇಮಗಿರೆ, ಸುನೀಲ ಚೌಗುಲೆ, ಅರುಣ ಶಿರಗುಪ್ಪೆ, ಬಾಳಾಸಾಬ ಕಾಟಕರ, ಅಪ್ರೋಜ್ ಕನವಾಡೆ, ಮಹಾದೇವ ಢಂಗ, ವೆಶಾಲಿ ಚೌಗುಲೆ, ಸುಹಾಸಿನಿ ಮೋನೆ, ಶೇಡಬಾಳ ಶಾಖೆ ಅಧ್ಯ ನೇಮಗೌಡ ನರಸಗೌಡರ, ಮಂಗಸೂಳಿ ಶಾಖೆ ಅಧ್ಯ ಅಮರ ಪಾಟೀಲ, ಮೀರಾಸಾಬ್ ಸನದಿ, ಪ್ರಕಾಶ ಹೇಮಗಿರೆ, ರಾಕೇಶ ಅಕಿವಾಟೆ, ಬಾಹುಬಲಿ ಗಿರಗಾಂವೆ, ಶಾಖೆಗಳ ಸಲಹಾ ಸಮಿತಿಯ ಸದಸ್ಯರು, ಸಿಬ್ಬಂದಿ, ಸದಸ್ಯರು ಉಪಸ್ಥಿತರಿದ್ದರು.