ಬ್ಯಾಡಗಿ: ಜ್ಞಾನವು ದೇವರನ್ನು ಸ್ತುತಿಸುವುದಕ್ಕೋಸ್ಕರ ಬಳಸುವ ಏಕೈಕ ಮಾರ್ಗವಾಗಿದೆ ಎಂದು ನೊಣವಿನಕೆರೆಯ ಕಾಡಸಿದ್ಧೇಶ್ವರ ಮಠದ ಡಾ.ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಮೋಟೆಬೆನ್ನೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ವಿಶ್ವಶಾಂತಿ ಹಾಗೂ ಪ್ರದೇಶಾಭಿವೃದ್ಧಿಗೆ ನೆಗಳೂರು ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮೌನಾನುಷ್ಠಾನ ಮಂಗಲೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಲೌಕಿಕ ಜಗತ್ತಿನಲ್ಲಿ ಉತ್ಸುಕನಾದ ಮನುಷ್ಯ ತನ್ನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದೇ ವ್ಯಕ್ತಿಯು ಭಕ್ತಿಯ ಮಾರ್ಗ ಹಿಡಿದಲ್ಲಿ ಆತನ ಆತ್ಮಶುದ್ಧಿಯಾಗಲಿದ್ದು ಇದರಿಂದ ಆತನ ಪ್ರಾಪಂಚಿಕ ಬದುಕಿನಲ್ಲಿ ಬಹಳಷ್ಟು ಬದಲಾವಣೆಯಾಗಲಿದೆ ಎಂದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ನೀಡದಿದ್ದಲ್ಲಿ ಸಮಾಜದ ಮೇಲೆ ಪರಿಣಾಮ ಬೀರಲಿದೆ. ಧರ್ಮ ಜಾಗೃತಿ, ಧರ್ಮಕಾರ್ಯಗಳಲ್ಲಿ ತೊಡಗಿರುವ ಮಠ-ಮಂದಿರಗಳಿಗೆ ಸಹಕಾರ ನೀಡಬೇಕಿದೆ ಎಂದರು.
ಅಮ್ಮಿನಭಾವಿ ಹಿರೇಮಠದ ಅಭಿನವ ಶಾಂತಲಿಂಗ ಶ್ರೀಗಳು, ನವಲೆ ಹಿರೇಮಠದ ಅಭಿನವ ಶಿವಲಿಂಗ ಶ್ರೀಗಳು, ಹಾವನೂರು ದಳವಾಯಿಮಠದ ಶಿವಕುಮಾರ ಶ್ರೀಗಳು, ಟ್ರಸ್ಟ್ ಅಧ್ಯಕ್ಷ ಯುವರಾಜ ಬಳ್ಳಾರಿ, ಗ್ರಾಪಂ ಅಧ್ಯಕ್ಷೆ ಪಾರ್ವತಿ ನಾಯಕ, ಉಪಾಧ್ಯಕ್ಷೆ ಮೀನಾಕ್ಷಿ ಅಂಗಡಿ, ಗ್ರಾಮಸ್ಥರಾದ ವಿ.ವಿ.ಹಿರೇಮಠ, ಬಿ.ಸಿ.ಹಾವೇರಿಮಠ, ಚನ್ನವೀರಪ್ಪ ಬಳ್ಳಾರಿ, ಡಾ.ಪ್ರೇಮಾನಂದ ಲಕ್ಕಣ್ಣವರ, ಷಣ್ಮುಖಪ್ಪ ಬಳ್ಳಾರಿ, ಶಿವಬಸಪ್ಪ ಕುಳೇನೂರ, ಮಲ್ಲಿಕಾರ್ಜುನ ಬಳ್ಳಾರಿ, ವಿಜಯಭರತ ಬಳ್ಳಾರಿ, ನಾಗರಾಜ ಆನ್ವೇರಿ, ಶಿವಾನಂದ ಬೆನ್ನೂರ, ಕ್ಯಾನಕೋರ್ ಪ್ರೈ.ಲಿ. ವ್ಯವಸ್ಥಾಪಕ ಎಂ.ಕಿಶನಕುಮಾರ ಇದ್ದರು.