ಜಿಲ್ಲೆ

ಸ್ವಯಂ ಪ್ರೇರಿತ ರಕ್ತದಾನಕ್ಕೆ ಮುಂದಾಗಲಿ

ಕೊಳವಿ: ಒಂದು ಯೂನಿಟ್​ ರಕ್ತ ಮೂರು ಜೀವ ಉಳಿಸಲು ಸಹಕಾರಿಯಾಗುತ್ತದೆ. ರಕ್ತದಾನದಿಂದ ಆರೋಗ್ಯ ವೃದ್ಧಿಸುತ್ತದೆ. ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಗೋಕಾಕ ರೋಟರಿ ಸಂಸ್ಥೆ ಅಧ್ಯ ಡಾ.ಸಿದ್ದಣ್ಣ ಕಮತ ಹೇಳಿದರು.

ಸಮೀಪದ ಮಮದಾಪುರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಲಯನ್ಸ್​ ಕ್ಲಬ್​, ರೋಟರಿ ಕ್ಲಬ್​ ಹಾಗೂ ಸ್ಥಳಿಯ ವಿವಿಧೋದ್ದೇಶಗಳ ಸಹಕಾರಿ ಸಂದ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಣ್ಣಿನ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸ್ಥಳಿಯ ಚರಮೂರ್ತೀಶ್ವರ ಸ್ವಾಮೀಜಿ ಮಾತನಾಡಿ, ಗೋಕಾಕನ ರೋಟರಿ ಸಂಸ್ಥೆ ಹಾಗೂ ಲಯನ್ಸ್​ ಸಂಸ್ಥೆಗಳ ಸಮಾಜಮುಖಿ ಕಾರ್ಯ ಶ್ಲಾನೀಯ ಎಂದರು.

ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. 25 ಜನರಿಗೆ ಕಣ್ಣಿನ ಉಚಿತ ಶಸ್ತ್ರಚಿಕಿತ್ಸೆಗೆ ನೆರವು ನೀಡಲಾಯಿತು.

ಮೌನ ಮಲ್ಲಿಕಾರ್ಜುನ ಶಿವಯೋಗಿಗಳು, ಗ್ರಾಪಂ ಅಧ್ಯೆ ಅನ್ನಪೂರ್ಣ ಭಜಂತ್ರಿ, ಲಯನ್ಸ್​ ಸಂಸ್ಥೆ ಅಧ್ಯ ಅಶೋಕ ಲಗಮಪ್ಪಗೊಳ, ಮಾಜಿ ಅಧ್ಯ ಡಾ.ಅಶೋಕ ಮುರುಗೋಡ, ಡಾ.ಶಂಕರ ತೇರದಾಳ, ಪಿಡಿಒ ವಿನಾಯಕ ಮಾಳಿ, ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ರಮೇಶ ಗಾಣಗಿ, ವೀರಭದ್ರ ಮೈಲನ್ನವರ, ಅಶೋಕ ಗೋಪಾಳಿ, ಶಂಕರಗೌಡ ಪಾಟೀಲ, ಶಿವಲಿಂಗಪ್ಪ ಕಮತ, ರವೀಂದ್ರ ದೇಮಶೆಟ್ಟಿ ಇತರರಿದ್ದರು.