ಕಂಪ್ಲಿಯಲ್ಲಿ ಕೌಶಲ ತರಬೇತಿ ಫಲಾನುಭವಿಗಳಿಗೆ ಶಾಸಕ ಜೆ.ಎನ್.ಗಣೇಶ್ ಪ್ರಮಾಣ ಪತ್ರ ವಿತರಿಸಿದರು. ಪವಿತ್ರಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಪವಿತ್ರಾ ಶಿವನಗೌಡ, ಪ್ರಮುಖರಾದ ವಿವೇಕಗೌಡ, ಶಿವನಗೌಡ, ರಜನಿ, ಸ್ವಾತಿ, ಉದಯಮೇರಿ ಇತರರಿದ್ದರು. 
ಜಿಲ್ಲೆ

ಸ್ವಯಂ ಉದ್ಯೋಗ ಕಂಡುಕೊಳ್ಳಿ

ಕಂಪ್ಲಿ: ಮಹಿಳೆಯರ ಕೌಶಲ ಅಭಿವೃದ್ಧಿ, ಜೀವನೋಪಾಯ ಹೆಚ್ಚಿಸಲು ಪಿಎಂ ವಿಶ್ವಕರ್ಮ ಯೋಜನೆ ಮಹತ್ವದ್ದಾಗಿದ್ದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪವಿತ್ರಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಪವಿತ್ರಾ ಶಿವನಗೌಡ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಪವಿತ್ರಾ ಚಾರಿಟಬಲ್ ಟ್ರಸ್ಟ್‌ನಿಂದ ಮೊಸಾಯಿಕ್ ವರ್ಕ್‌ಸ್ಕಿಲ್, ಪಿಎಂ ವಿಶ್ವಕರ್ಮ ಯೋಜನೆಯಡಿ ಹಮ್ಮಿಕೊಂಡಿದ್ದ ಉಚಿತ ಕೌಶಲ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು. ಸೂಕ್ತ ತರಬೇತಿ ಪಡೆದು ಕೌಶಲ ಅಭಿವೃದ್ದಿಗೊಳಿಸಿಕೊಳ್ಳುವ ಮೂಲಕ ಸ್ವಯಂ ಉದ್ಯೋಗ ಕಂಡುಕೊಳ್ಳಬೇಕು. ಕೇಂದ್ರ ಸರ್ಕಾರದ ಶಿಷ್ಯವೇತನ, ಬ್ಯಾಂಕ್ ಸೌಲಭ್ಯ ದೊರಕಲಿದೆ ಎಂದರು.

ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಸ್ವಯಂ ಉದ್ಯೋಗದಿಂದ ಆರ್ಥಿಕ, ಸಾಮಾಜಿಕ ಸ್ಥಿತಿಗತಿಯನ್ನು ಸುಧಾರಿಸಿಕೊಳ್ಳಬಹುದು. ಸಾಂಪ್ರದಾಯಿಕ ಕುಶಲಕರ್ಮಿಗಳು ಹೊಸ ವಿನ್ಯಾಸ ಅಳವಡಿಸಿಕೊಳ್ಳುವ ಮೂಲಕ ವೃತ್ತಿ ನೈಪುಣ್ಯ ಸಾಧಿಸಲು ಅವಕಾಶವಿದೆ.

ಮಹಿಳೆಯರು ಸೂಕ್ತ ತರಬೇತಿ ಪಡೆದುಕೊಳ್ಳಲು ಮುಂದಾಗಬೇಕು ಎಂದರು. 400 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪ್ರಮುಖರಾದ ಕೆ.ಶ್ರೀನಿವಾಸರಾವ್, ಶಿವನಗೌಡ, ವಿವೇಕಗೌಡ, ಭಟ್ಟ ಪ್ರಸಾದ್, ಸುಧಾಕರ, ಜಾಫರ್, ತರಬೇತುದಾರರಾದ ರಜನಿ, ಸ್ವಾತಿ, ಶೈಲಜಾ, ಉದಯಮೇರಿ, ಇ.ಸ್ವಾತಿ ಇತರರಿದ್ದರು.