ಜಿಲ್ಲೆ

ಪ್ರಾಂತ್ಯ ಶಾಲೆಯಲ್ಲಿ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮ

Avinash R

ಮೂಡುಬಿದಿರೆ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡುಬಿದಿರೆ ತಾಲೂಕು ಸಹಭಾಗಿತ್ವದಲ್ಲಿ ಪ್ರಾಂತ್ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮ ನಡೆಯಿತು.

ಜನಜಾಗೃತಿ ತಾಲೂಕು ಉಪಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ಉಪನ್ಯಾಸಕ ಡಾ.ಪ್ರಭಾಕರ ಸಂಪನ್ಮೂಲ ವ್ಯಕ್ತಿಯಾಗಿದ್ದರು.

ಜನಜಾಗೃತಿ ವಲಯ ಅಧ್ಯಕ್ಷ ಜೋಸ್ಸಿ ಮೆನೇಜಸ್, ಪ್ರಾಂತ್ಯ ಶಾಲೆ ಮುಖ್ಯಶಿಕ್ಷಕ ರಾಮಚಂದ್ರ, ಪ್ರಗತಿ ಬಂಧು ಒಕ್ಕೂಟದ ವಲಯ ಅಧ್ಯಕ್ಷ ಅರುಣ್ ಶೆಟ್ಟಿ, ಪ್ರಾಂತ್ಯ ಒಕ್ಕೂಟದ ಅಧ್ಯಕ್ಷ ಸೋಮನಾಥ ಪೂಜಾರಿ, ಕಚೇರಿ ಪ್ರಬಂಧಕ ಕಾರ್ತಿಕ್, ಕಲ್ಲಬೆಟ್ಟು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸ್ಮಿತಾ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಾಂತ್ಯ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಅನುಪಮ ಸ್ವಾಗತಿಸಿದರು. ಜ್ಯೋತಿನಗರ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಅನಿತಾ ಪಿ.ಬಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ರೂಪಾ ಎಸ್.ಕಿಣಿ ವಂದಿಸಿದರು.