ಉಡುಪಿ: ವಿದ್ಯಾರ್ಥಿನಿಯರ ಸ್ವ ರಕ್ಷಣಾ ಪ್ರಶಿಕ್ಷಣಕ್ಕೆಂದು 2015ಕ್ಕೇ ಪ್ರಾರಂಭವಾದ ಮಿಷನ್ ಸಾಹಸಿ ಕಾರ್ಯಕ್ರಮ ದೇಶಾದ್ಯಂತ ಅಭಿಯಾನವಾಗಿ ಪರಿವರ್ತನೆಯಾಗಿದೆ ಎಂದು ಎಬಿವಿಪಿಯ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ ಹೇಳಿದರು.
ಮಂಗಳವಾರ ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ 1 ವಾರ ನಡೆಯುವ ಮಿಷನ್ ಸಾಹಸಿ ಸ್ವರಕ್ಷಣಾ ಕಲಿಕಾ ತರಗತಿ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಮಹಿಳಾ ಕಾಲೇಜು, ತೆಂಕನಿಡಿಯೂರು, ವಿಬಿಸಿಎಲ್, ಎಂಜಿಎಂ ಕಾಲೇಜಿನ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಕಾರ್ಯಕಾರಿ ಸಮಿತಿ ಅಧ್ಯಕ್ಷ ಶಾಮ್ ಪ್ರಸಾದ್ ಕುಡ್ವ ಎಬಿವಿಪಿ ಇಂತಹ ರಚನಾತ್ಮಕ ಕಾರ್ಯಕ್ರಮಗಳಿಂದ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಪ್ರೇರೇಪಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕರಾಟೆ ತರಬೇತುದಾರ ಲಕ್ಷ್ಮಿಕಾಂತ್, ಎಬಿವಿಪಿಯ ವಿಭಾಗ ಸಂಚಾಲಕ ನಿಾನ್ ಆಳ್ವ, ಜಿಲ್ಲಾ ಸಂಚಾಲಕ ಗಣೇಶ್ ಪೂಜಾರಿ, ತಾಲೂಕು ಸಂಚಾಲಕರಾದ ಅಜಿತ್ ಜೋಗಿ, ನಗರ ಕಾರ್ಯದರ್ಶಿ ಶ್ರೀವತ್ಸ ಮತ್ತು ಪ್ರಮುಖರಾದ ನವೀನ್, ಕಾರ್ತಿಕ್, ಶಿಶಿರ್, ಅನಂತ್, ಅನೂಪ್, ಮಾಣಿಕ್ಯ ಭಾಗವಹಿಸಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಸಂಧ್ಯಾ ಸ್ವಾಗತಿಸಿ, ಎಬಿವಿಪಿ ನಗರ ವಿದ್ಯಾರ್ಥಿನಿ ಪ್ರಮುಖ ಸಂಹಿತ ಶಾಸ್ತ್ರಿ ವಂದಿಸಿದರು. ನಂತರ ಫೀನಿಕ್ಸ್ ಅಕಾಡೆಮಿ ಸಂಸ್ಥಾಪಕ ಶಿಹಾನ್ ಕೀರ್ತಿ ಜಿ. ಅವರು ತರಗತಿಯನ್ನು ಪ್ರಾರಂಭಿಸಿದರು. ನಗರ ಸಹ-ಕಾರ್ಯದರ್ಶಿ ಭಾವನಾ ನಿರೂಪಿಸಿದರು.