ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರ ಸಪ್ತಾಪುರ ಉದಯ ಹಾಸ್ಟೇಲ್ ಬಳಿಯ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ದ ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆ ಪ್ರಕ್ರಿಯೆಯು ಫೆ. 10ರಿಂದ 12ರವರೆಗೆ ನಡೆಯಲಿದೆ.
ಫೆ. 10ರಂದು 13ರಿಂದ 16 ವರ್ಷದೊಳಗಿನವರಿಗೆ ಬಾಸ್ಕೆಟ್ ಬಾಲ್, ಕುಸ್ತಿ ಹಾಗೂ ಫೆ. 11ರಂದು 13ರಿಂದ 15 ವರ್ಷದೊಳಗಿನವರಿಗೆ ಕಬಡ್ಡಿ ಕ್ರೀಡೆಗಳು ನಡೆಯಲಿವೆ. ಕನಿಷ್ಠ ಜಿಲ್ಲಾ ಮಟ್ಟದಲ್ಲಿ ಪದಕಗಳನ್ನು ಪಡೆದಿರುವ ಬಾಲಕರು ಅಗತ್ಯ ದಾಖಲೆಗಳೊಂದಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು ಹೆಚ್ಚಿನ ಮಾಹಿತಿಗೆ ಸಾಯ್ ವಸತಿ ನಿಲಯ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.