ನರೇಗಲ್ಲ: ದಶಮಾನೋತ್ಸವ ಹೊಸ್ತಿಲಲ್ಲಿರುವ ನರೇಗಲ್ಲದ ಬೀಚಿ ಬಳಗಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಭಾನುವಾರ ಸಂಜೆ ನಡೆಯಿತು.
ಗೌರವಾಧ್ಯಕ್ಷರಾಗಿ ಹಾಲಕೆರೆಯ ಅನ್ನದಾನೇಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ, ಅಧ್ಯಕ್ಷರಾಗಿ ಕೆ.ಎಸ್. ಕಳಕಣ್ಣವರ, ಉಪಾಧ್ಯಕ್ಷರಾಗಿ ನಿರ್ಮಲಾ ಹಿರೇಮಠ, ಸಂಚಾಲಕರಾಗಿ ಆರ್.ಎಸ್. ನರೇಗಲ್ಲ, ಕಾರ್ಯದರ್ಶಿಗಳಾಗಿ ಈಶ್ವರ ಬೆಟಗೇರಿ , ಎಚ್.ವಿ. ಈಟಿ ಹಾಗೂ ಖಜಾಂಚಿಯಾಗಿ ಶಿವಯೋಗಿ ಜಕ್ಕಲಿ ಆಯ್ಕೆಯಾಗಿದ್ದಾರೆ.