ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ಹಡಪದ ಅಪ್ಪಣ್ಣ ಸಮಾನ ಸೇವಾ ಸಂಘದ ಪ್ರಮುಖರ ಸಭೆಯು ನಗರದ ಕಾಲೇಜು ರಸ್ತೆಯ ನಿವೃತ್ತ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಜರುಗಿತು.
ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ನಿರ್ದೇಶನದಂತೆ ಜಿಲ್ಲಾ ಮಟ್ಟದಿಂದ 4 ಸಮಿತಿಗಳಿಗೆ ರಾಜ್ಯ ಸಂಘದ ಸದಸ್ಯತ್ವ ಹೊಂದಿದ ಸದಸ್ಯರನ್ನು ವಿವಿಧ ವಿಭಾಗಗಳಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು .
ಸಭೆ ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಚಿಕ್ಕಬೆಳ್ಳಿಕಟ್ಟಿ ಮಾತನಾಡಿ, ರಾಜ್ಯ ಸಮಿತಿ ಸೂಚನೆಯಂತೆ ಜಿಲ್ಲೆಯಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸಲಾಗುವುದು. ಆಯ್ಕೆಯಾದ ಪ್ರತಿನಿಧಿಗಳು ರಾಜ್ಯ ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳ ಜತೆಗೆ ಸಮಾಜದ ಸಂಘಟನೆಯಲ್ಲಿ ಕ್ರಿಯಾಶೀಲರಾಗಬೇಕು. ಸಮಾಜ ಬಾಂಧವರೂ ಪ್ರತಿನಿಧಿಗಳಿಗೆ ಸೂಕ್ತ ಸಲಹೆ-ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಮಹಿಳಾ ಸಮಿತಿಗೆ ಶಾಂತಕ್ಕ ಹಡಪದ, ಕ್ಷೌರಿಕ ವೃತ್ತಿ ಬಾಂಧವರ ಸಮಿತಿಗೆ ಮುದಕಪ್ಪ ಹಡಪದ, ಸರ್ಕಾರಿ ನೌಕರ ಮತ್ತು ನಿವೃತ್ತ ನೌಕರರ ಸಲಹಾ ಸಮಿತಿಗೆ ಮಹಾರುದ್ರಪ್ಪ ಪಡೇಸೂರ, ಕಲಾವಿದರ ಸಮಿತಿಗೆ ಮಹಾಂತೇಶ ಹಡಪದ ಮತ್ತು ಹಿರಿಯರ ಸಲಹಾ ಸಮಿತಿಗೆ ಪರಶುರಾಮ ಹಡಪದ ಆಯ್ಕೆಯಾದರು.
ಸಮಾಜದ ಮುಖಂಡರಾದ ನಿಂಗರಾಜ ಹಡಪದ, ಅನ್ನಪೂರ್ಣ ಮನ್ನಾಪುರ, ಮಲ್ಲಿಕಾರ್ಜುನ ಹಡಪದ, ಸಂಗಮೇಶ ಬೂದಿಹಾಳ, ಎಲ್ಲಪ್ಪ ಗೊಬ್ಬರಗುಂಪಿ, ಈರಣ್ಣ ಹಡಪದ, ಮಾರುತಿ ಹಡಪದ, ಇತರರು ಇದ್ದರು.
ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಫಕ್ಕಿರೇಶ ಹಡಪದ ಸ್ವಾಗತಿಸಿದರು. ಪರಶುರಾಮ ಹಡಪದ ನಿರೂಪಿಸಿದರು. ನಿಂಗಣ್ಣ ಹಡಪದ ವಂದಿಸಿದರು.