ಜಿಲ್ಲೆ

ತಾಲೂಕು ಕೃಷಿಕ ಸಮಾಜಕ್ಕೆ ಪದಾಧಿಕಾರಿಗಳ ಆಯ್ಕೆ

ಮುಂಡರಗಿ: ಪಟ್ಟಣದ ಕೃಷಿ ಇಲಾಖೆ ಸಭಾಭವನದಲ್ಲಿ ತಾಲೂಕು ಕೃಷಿಕ ಸಮಾಜದ 2025-26ರಿಂದ 2029-30ನೇ ಸಾಲಿನ ಅವಧಿಗೆ ಪದಾಧಿಕಾರಿಗಳನ್ನು ಮಂಗಳವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಶಿವಪ್ಪ ಅಂಕದ, ಉಪಾಧ್ಯಕ್ಷರಾಗಿ ಸುರೇಶ ಹಲವಾಗಲಿ, ಪ್ರಧಾನ ಕಾರ್ಯದರ್ಶಿಯಾಗಿ ಶಿವಪ್ಪ ನವಲಗುಂದ, ಖಜಾಂಚಿಯಾಗಿ ಹನಮರಡ್ಡಿ ಮಾದಿನೂರ, ಜಿಲ್ಲಾ ಪ್ರತಿನಿಧಿಯಾಗಿ ಶಿವಕುಮಾರಗೌಡ ಪಾಟೀಲ ಅವಿರೋಧವಾಗಿ ಆಯ್ಕೆಗೊಂಡರು.

ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ಶ್ರೀಶೈಲಸ್ವಾಮಿ ಕಣವಿಮಠ, ನಾರಾಯಣ ಇಲ್ಲೂರ, ಸುರೇಶ ಕ್ಯಾದಿಗಿಹಳ್ಳಿ, ಬಾಲಪ್ಪ ರ್ಯಾವಣಕಿ, ಅಂಬವ್ವ ಕಟ್ಟಿಮನಿ, ಶಾಂತವೀರಗೌಡ ಹೊಸಮನಿ, ತಿಪ್ಪಣ್ಣ ಕುಂಬಾರ, ಧನಂಜಯ ದ್ರಾಕ್ಷಿ, ಈಶ್ವರಪ್ಪ ಮಲಶೆಟ್ಟಿ, ಮುದಕನಗೌಡ ಪಾಟೀಲ, ಚುನಾವಣಾಧಿಕಾರಿ ಪ್ರಾಣೇಶ, ಚುನಾವಣಾ ಸಹಾಯಕ ಶಿವಮೂರ್ತಿ ನಾಯ್್ಕ ಇದ್ದರು.