ಜಿಲ್ಲೆ

ರೈತ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಗುಂಡ್ಲುಪೇಟೆ: ರಾಜ್ಯ ರೈತ ಸಂಘದ ತಾಲೂಕು ಯುವ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಾದೇವಪ್ಪ ಹಾಗೂ ರಾಜ್ಯ ಯುವ ಘಟಕದ ಸಂಚಾಲಕ ಯಶ್ವಂತ್ ನೇತೃತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಘಟಕದ ನೂತನ ಅಧ್ಯಕ್ಷರಾಗಿ ತಾಲೂಕಿನ ಶಿವಪುರ ಗ್ರಾಮದ ಭರತ್, ಉಪಾಧ್ಯಕ್ಷರಾಗಿ ಮಳವಳ್ಳಿ ಮಹೇಶ್ ಮತ್ತು ಕೋಡಹಳ್ಳಿ ಪ್ರಸಾದ್, ಪ್ರಧಾನ ಕಾರ್ಯದರ್ಶಿಯಾಗಿ ರಘು, ಸಹಕಾರ್ಯದಶಿಯಾಗಿ ಗಿರೀಶ್ ಪಡಗೂರು, ಸಂಘಟನಾ ಕಾರ್ಯದರ್ಶಿಯಾಗಿ ರೇವಣ್ಣ, ಕಸಬಾ ಹೋಬಳಿ ಅಧ್ಯಕ್ಷರಾಗಿ ಪ್ರವೀಣ್, ಹಂಗಳ ಹೋಬಳಿ ಅಧ್ಯಕ್ಷರಾಗಿ ಮನು, ಬೇಗೂರು ಹೋಬಳಿ ಅಧ್ಯಕ್ಷರಾಗಿ ಸೃಜನ್, ತೆರಕಣಾಂಬಿ ಹೋಬಳಿ ಅಧ್ಯಕ್ಷರಾಗಿ ಮಂಜು ಆಯ್ಕೆಯಾದರು.

ಯುವ ಘಟಕದ ರಾಜ್ಯ ಸಂಚಾಲಕ ಟಿ.ನರಸೀಪುರ ಚಂದ್ರು, ತಾಲೂಕು ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಹಂಗಳ ದಿಲೀಪ್, ಉಪಾಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ಶಿವಣ್ಣ ಇತರರು ಇದ್ದರು.