ಮೈಸೂರು: ನಗರದ ಪೊಲೀಸ್ ಬಡಾವಣೆ (ಸರ್ದಾರ್ ವಲ್ಲಭಭಾಯ್‌ಪಟೇಲ್ ನಗರ) ಎರಡನೇ ಹಂತದ ಸಮಾನ ಮನಸ್ಕರ ವೇದಿಕೆಗೆ ನೂತನವಾಗಿ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ವೇದಿಕೆಯ ಗೌರವಾಧ್ಯಕ್ಷರಾಗಿ ಜಯಪಾಲ್, ಅಧ್ಯಕ್ಷರಾಗಿ ಥಾಮಸ್, ಉಪಾಧ್ಯಕ್ಷರಾಗಿ ಮೂಡ್ನಾಕೂಡು ಎಸ್. ಶಿವಸ್ವಾಮಿ, ಕಾರ್ಯದರ್ಶಿಯಾಗಿ ಎನ್. ಮುರಳೀಧರ ಮಾನೆ, ನಿರ್ದೇಶಕರಾಗಿ ಎಸ್.ಮನುಕುಮಾರ್, ಎನ್.ಮೋಹನಕುಮಾರ್, ಪಿ.ರೇವಣ್ಣ, ಸಹಾಯಕ ನಿರ್ದೇಶಕರಾಗಿ ಶೋಭಾಮಣಿ, ವೀಣಾ ಕಾಮತ್, ಸಿದ್ದರಾಜೇಗೌಡ, ಚೆಲುವೇಗೌಡ, ಸಿದ್ದರಾಜು, ಸಲಹೆಗಾರರಾಗಿ ಜಿ.ಮೋಹನರಾವ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ವೇದಿಕೆ ಪ್ರಕಟಣೆ ತಿಳಿಸಿದೆ.