ವಿಜಯಪುರ: ಇಲ್ಲಿನ ಶ್ರೀ ಶಿವಾಜಿ ಮಹಾರಾಜ ಕೋ ಆಪ್ ಕ್ರೆಡಿಟ್ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನಡೆಯಿತು.
ಎಣಿಕೆ ಬಳಿಕ ಚುನಾವಣಾಧಿಕಾರಿಗಳು ಫಲಿತಾಂಶ ೂಷಣೆ ಮಾಡಿದರು. ಮುಂದಿನ 5 ವರ್ಷಗಳ ಅವಧಿಗೆ ನಿರ್ದೇಶಕರಾಗಿ ಡಾ. ಸದಾಶಿವ ಪವಾರ, ಶಂಕರ ಕನಸೆ, ಮಹಾದೇವ ಪವಾರ, ರಾಮಚಂದ್ರ ಚವ್ಹಾಣ, ಸಂಜಯ ಜಂಬೂರೆ, ಬಾಬುರಾವ ತರಸೆ ಹಾಗೂ ಪ್ರವಿಣ ಬೊಡಕೆ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ಮಹೇಶ ಹಿಟ್ನಳ್ಳಿ ಹಾಗೂ ಪ್ರಧಾನ ವ್ಯವಸ್ಥಾಪಕ ಸಂಜಯ ಜಾಧವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.