ಜಿಲ್ಲೆ

ಕುದರಗುಂಡಿ ಡೇರಿಗೆ ನಿರ್ದೇಶಕರ ಅವಿರೋಧ ಆಯ್ಕೆ

ನಾಗೇಶ ಎಸ್

ಮದ್ದೂರು: ತಾಲೂಕಿನ ಕುದರಗುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ 13 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕೆ.ಬಿ.ರಾಜು, ಕೆ.ಎಸ್.ಶಕ್ತಿ ಪ್ರಕಾಶ್, ಕೆ.ಎಂ.ಉಮೇಶ, ಕೆ.ಪಿ.ರಾಜು, ಕೆ.ಆರ್.ಉಮೇಶ್, ಕೆ.ಎಲ್.ಪ್ರಭು, ಕೆ.ಪಿ.ಬೋರೇಗೌಡ, ಉಮಾ, ಲಕ್ಷ್ಮಮ್ಮ, ಮಂಗಳಮ್ಮ, ಲಕ್ಷ್ಮಮ್ಮ, ಕೆ.ಬಿ.ಶ್ರೀಕಂಠ, ಕೆ.ಬಿ.ನಂಜುಂಡೇಗೌಡ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಜಿ.ವಿ.ಮುತ್ತುರಾಜು ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ಶ್ರೀ ಕಾಲ ಭೈರವೇಶ್ವರ ಟ್ರಸ್ಟಿಗಳಾದ ಕೆ.ಸಿ.ಶಿವರಾಮು, ಕೆ.ಬಿ.ಕೃಷ್ಣಪ್ಪ, ಕೆ.ಎಲ್.ಪ್ರಭು, ಕೆ.ಸಿ.ಬೋರೇಗೌಡ, ಕೆ.ಬಿ.ಶಶಿಧರ್, ಕೆ.ಎಸ್.ಪ್ರಶಾಂತ್, ಕೆ.ಸಿ.ಜಯರಾಮು, ಕೆ.ಎಸ್.ನಾಗೇಶ್, ಕೆ.ಬಿ.ನಾಗೇಶ್, (ಕೆ.ಬಿ.ಎನ್.ಟ್ರಾನ್ಸ್‌ಪೋರ್ಟ್), ಕೆ.ಪಿ.ಶ್ರೀಧರ್, ಸೊಸೈಟಿ ರಾಜೇಶ, ಸಂಘದ ಮುಖ್ಯ ಕಾರ್ಯನಿರ್ವಾಹಕ ಕೆ.ಎಸ್.ಸುಧಾಕರ್, ಗ್ರಾಮದ ಮುಖಂಡರಾದ ಚಾಮರಾಜು, ಕೆ.ಟಿ.ನಾಗೇಂದ್ರ, ಕೆ.ಬಿ.ಶಂಕರ್, ಕೆ.ಎಂ.ಸಿದ್ದಪ್ಪಗೌಡ ಇದ್ದರು.