ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ವಿಭಾಗಿಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಶಾಸಕ ಡಿ.ರವಿಶಂಕರ್ ಶುಭ ಹಾರೈಸಿದರು. 
ಜಿಲ್ಲೆ

ವಿಭಾಗಿಯ ಮಟ್ಟಕ್ಕೆ ಕ್ರೀಡಾಪಟುಗಳು ಆಯ್ಕೆ

ನಾಗೇಶ ಎಸ್

ಸಾಲಿಗ್ರಾಮ: ಕೆ.ಆರ್.ನಗರದ ಭೇರ್ಯ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಇತ್ತೀಚೆಗೆ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲೆಯ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯಿತು.

ಪ್ರೌಢಶಾಲಾ ವಿಭಾಗ ಹಾಗೂ ಪ್ರಾಥಮಿಕ ಶಾಲಾ ಮಟ್ಟದ ಕ್ರೀಡಾಪಟುಗಳ ಪ್ರತ್ಯೇಕ ಸ್ಪರ್ಧೆ ನಡೆಯಿತು. ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ನಂಜನಗೂಡು ತಾಲೂಕಿನ ಜೆಎಸ್‌ಎಸ್ ಸುತ್ತೂರು ಶಾಲೆಯ ಕ್ರೀಡಾಪಟುಗಳು ಪ್ರಥಮ, ಎಚ್.ಡಿ.ಕೋಟೆ ತಾಲೂಕಿನ ಸೇಂಟ್ ಮೇರಿಯಾ ಶಾಲೆಯ ಕ್ರೀಡಾಪಟು ದ್ವಿತೀಯ ಸ್ಥಾನ ಪಡೆದರು. ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ನಂಜನಗೂಡು ತಾಲೂಕಿನ ಜಿಎಚ್‌ಎಸ್ ತಾಂಡವಪುರ ಶಾಲೆಯ ಕ್ರೀಡಾಪಟುಗಳು ಪ್ರಥಮ, ಮೈಸೂರು ತಾಲೂಕಿನ ಹೂಟಗಳ್ಳಿ ಜಿಎಚ್‌ಎಸ್ ಶಾಲೆಯ ಕ್ರೀಡಾಪಟುಗಳು ದ್ವಿತೀಯ ಸ್ಥಾನ ಪಡೆದರು.

ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಹುಣಸೂರು ತಾಲೂಕಿನ ಎಚ್‌ಪಿಎಸ್ ನೆರಳಗುಪ್ಪೆ ಶಾಲೆಯ ಕ್ರೀಡಾಪಟುಗಳು ಪ್ರಥಮ, ಮೈಸೂರು ಉತ್ತರ ಟೆರೆಷಿಯನ್ ಶಾಲೆಯ ಕ್ರೀಡಾಪಟುಗಳು ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಹುಣಸೂರು ತಾಲೂಕಿನ ಶ್ರೀ ವಾಲ್ಮೀಕಿ ಆಶ್ರಮ ಶಾಲೆಯ ಕ್ರೀಡಾಪಟುಗಳು ಪ್ರಥಮ, ನಂಜನಗೂಡು ತಾಲೂಕಿನ ಜೆಎಸ್‌ಎಸ್ ಸುತ್ತೂರು ಶಾಲೆಯ ಕ್ರೀಡಾಪಟುಗಳು ದ್ವಿತೀಯ ಸ್ಥಾನ ಪಡೆದರು.