ಮೈಸೂರು: ಜಯನಗರ ಶ್ರೀಕೃಷ್ಣದೇವರಾಯ ರಸ್ತೆಯಲ್ಲಿರುವ ಬಲಿಜ ಸಂಘಕ್ಕೆ ಭಾನುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ನಟ ದರ್ಶನ್ ತಾಯಿ ಮೀನಾ ತೂಗುದೀಪ್ ಶ್ರೀನಿವಾಸ್ ಸೇರಿದಂತೆ 15 ಜನ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ.
2024ರಿಂದ 2029ನೇ ಸಾಲಿಗೆ ನಡೆದ ಚುನಾವಣೆಯಲ್ಲಿ 15 ನಿರ್ದೇಶಕ ಸ್ಥಾನಕ್ಕೆ ಒಟ್ಟು 30 ಜನ ಸ್ಪರ್ಧಿಸಿದ್ದರು. ಐದು ವರ್ಷಗಳ ಅವಧಿಗೆ ಎಸ್.ಹೇಮಂತ್‌ಕುಮಾರ್, ಕೆ.ಲಿಂಗರಾಜು, ಎಂ.ಎಸ್.ದಾಮೋದರ, ಜಿ. ಮಹೇಶ್‌ನಾಯ್ಡು, ಆರ್.ಮಂಜುನಾಥ್, ಯತಿರಾಜ್, ಎಚ್.ವಿ. ಗೋವಿಂದರಾಜ್, ಪಿ.ಕಾಮರಾಜ್, ಎಂ.ಎಸ್.ಯೋಗೀಶ್, ರಾಘವೇಂದ್ರ, ಎಸ್.ಆರ್.ರವಿಕುಮಾರ್, ಕೆ.ನಾಗರಾಜು ಜಯ ಗಳಿಸಿದರು. ಮಹಿಳಾ ಮೀಸಲು ಮೀನಾ ತೂಗುದೀಪ್ ಶ್ರೀನಿವಾಸ್, ಕೆ.ಸುನೀತಾ, ಇ.ಪೂಜಾ ಚುನಾಯಿತರಾದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಬನ್ನೂರು ಮಹೇಂದ್ರ ಸಿಂಗ್‌ಕಾಳಪ್ಪ, ಎಸ್.ಎನ್.ರಾಜೇಶ್, ಹರೀಶ್‌ನಾಯ್ಡು, ಲೀಲಾ ನಾಯ್ಡು, ಆನಂದ್, ನಟ ವಿಜಯ್ ಸೂರ್ಯ, ರಾಕೇಶ್ ನಾಯ್ಡು, ಕಿರಣ್ ನಾಯ್ಡು ಇತರರು ವಿಜೇತ ತಂಡಕ್ಕೆ ಶುಭ ಕೋರಿದರು.