ಜಿಲ್ಲೆ

ಮಾರಸಿಂಗನಹಳ್ಳಿ ಡೇರಿಗೆ 11 ನಿರ್ದೇಶಕರ ಆಯ್ಕೆ

ರಾಜಣ್ಣ

ಮದ್ದೂರು: ತಾಲೂಕಿನ ಮಾರಸಿಂಗನಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ಕಾಂಗ್ರೆಸ್ ಬೆಂಬಲಿತ 11 ನಿರ್ದೇಶಕರು ಚುನಾವಣೆಯಲ್ಲಿ ಗೆಲುವು ಸಾಧಿದ್ದಾರೆ.


ಸಂಘದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾದ ಪುಟ್ಟ, ಅಪ್ಪಾಜಿಗೌಡ, ಗೂಳಿಗೌಡ, ಶೋಭಾಗೌಡ, ಸವಿತಾ ಉಮೇಶ್, ಜಯಶೀಲಾ ಸೋಮಶೇಖರ್, ಶಶಿಕಲಾ ಪಾಪಣ್ಣ, ಆನಂದಮ್ಮ ರಾಮಚಂದ್ರ, ಶ್ರೀಕಂಠ, ಅಪ್ಪಾಜಿ, ಮಹದೇವಮ್ಮ, ಕೆ.ಟಿ.ಲಕ್ಷ್ಮೀ ಚುನಾಯಿತರಾದರು. ಚುನಾವಣಾಧಿಕಾರಿಯಾಗಿ ಸುಧಾಕರ್ ಕಾರ್ಯ ನಿರ್ವಹಿಸಿದ್ದರು.


ಕಾಂಗ್ರೆಸ್ ಬೆಂಬಲಿತ ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಕೆ.ಎಂ.ಉದಯ್, ಜಿಲ್ಲೆಯಲ್ಲಿ ಹೈನುಗಾರಿಕೆ ರೈತರ ಬಾಳಿಗೆ ಸಂಜೀವಿನಿಯಾಗಿದೆ. ಹೈನುಗಾರಿಕೆಯಿಂದ ಬಹಳಷ್ಟು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾರೆ. ಸರ್ಕಾರ ಹೈನುಗಾರಿಕೆಗೆ ವಿಶೇಷ ಯೋಜನೆಗಳನ್ನು ನೀಡುತ್ತಿದ್ದು, ಹಾಲು ಉತ್ಪಾದಕರು ಇದರ ಸದುಪಯೋಗ ಪಡಿಸಿಕೊಂಡು ಗುಣಮಟ್ಟದ ಹಾಲನ್ನು ಒಕ್ಕೂಟಕ್ಕೆ ಸರಬರಾಜು ಮಾಡಬೇಕು ಎಂದರು.


ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗುತ್ತಿದ್ದು, ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಗೆಲ್ಲುತ್ತಿರುವುದು ಸಂತೋಷ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಮುಖಂಡರಾದ ಮಾರಸಿಂಗನಹಳ್ಳಿ ರಾಮಚಂದ್ರು, ಮರಿಕೆಂಚೇಗೌಡ, ನಂಜೇಶ್, ರಮೇಶ್‌ಬಡ್ರೆ, ಕೃಷ್ಣಪ್ಪ, ಮನುಕುಮಾರ್, ದೊಡ್ಡಗೂಳಿಗೌಡ ಇತರರು ಇದ್ದರು.