ಬಂಟ್ವಾಳ: ತಾಲೂಕಿನ ವೀರಕಂಬ ಗ್ರಾಮದ ದ.ಕ ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯ, ಶಾಲಾಭಿವೃದ್ಧಿ ಸಮಿತಿಯ ನೂತನ ಸಮಿತಿಯ ಆಯ್ಕೆ ಗ್ರಾಪಂ ಉಪಾಧ್ಯಕ್ಷ ಜನಾರ್ದನ ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿತು.
ಕೊರಗಪ್ಪ ನಾಯ್ಕ ಸಿಂಗೇರಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ವನಿತಾ ಸಾರುನೊಜಿ, ಪ್ರಧಾನ ಕಾರ್ಯದರ್ಶಿಯಾಗಿ ಮುಖ್ಯಶಿಕ್ಷಕಿ ಬೆನೆಡಿಕ್ಟ ಆಗ್ನೇಸ್ ಮೆಂಡೋನ್ಸಾ, ಸದಸ್ಯರಾಗಿ ಆಶಾ ಗೋಳ್ತಮಜಲು, ಮಹಾಬಲ ನಾಯ್ಕ ಕಿನ್ನಿಮೂಲೆ, ಅಬ್ದುಲ್ ಮಜಿದ್ ವೀರಕಂಬ, ಉಮ್ಮರ್ ಫಾರೂಕ್ ಮದಕ, ರಹಮತ್ ವೀರಕಂಬ, ಫಾತಿಮಾ ಝೊಹರ ಕಂಪದಬೈಲು, ಮಾಲತಿ ಅನಂತಾಡಿ, ದಿವ್ಯ ಮಂಗಳಪದವು, ಗೀತಾ ಮೈರಾ, ವಿದ್ಯಾ ಗುಡ್ಡೆತೋಟ, ರಂಜಿತಾ ಮಜಿ, ಸುಧಾಕರ ವೀರಕಂಬ, ಗೋಪಾಲಕೃಷ್ಣ ಭಟ್ ದಿವಾನ, ವಾಮನ ಬಂಗೇರ ತುಳಸಿವನ, ಲಕ್ಷ್ಮಣಗೌಡ ನಂದಂತಿಮಾರು, ವಿಶ್ವನಾಥ ಎರ್ಮೆಮಜಲು ಆಯ್ಕೆಯಾದರು.
ಪದನಿಮಿತ್ತ ಸದಸ್ಯರಾಗಿ, ಶಿಕ್ಷಣ ಪ್ರೇಮಿ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು, ಗ್ರಾಪಂ ಸದಸ್ಯೆ ಗೀತಾ ಜಯಶೀಲಾ ಗಾಂಭೀರ್, ಆರೋಗ್ಯ ಸುರಕ್ಷಣಾಧಿಕಾರಿ ಜ್ಯೋತಿ, ಅಂಗನವಾಡಿ ಶಿಕ್ಷಕಿ ಸುಮತಿ, ಹಿರಿಯ ಶಿಕ್ಷಕಿ ಶಕುಂತಲಾ ಮೊದಲಾದವರನ್ನು ಆಯ್ಕೆ ಮಾಡಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ಇಂದುಶೇಖರ್ ಕುಲಾಲ್ ವಂದಿಸಿದರು. ಸಹ ಶಿಕ್ಷಕಿ ಸಂಗೀತಾ ಶರ್ಮ ಕಾರ್ಯಕ್ರಮ ನಿರೂಪಿಸಿದರು.