ಜಿಲ್ಲೆ

ಪಿ.ಆಯುಷ್ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ

ಆರ್.ಕೃಷ್ಣ

ಮೈಸೂರು: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ರಾಜ್ಯ ಸರ್ಕಾರದ ಐಟಿ ಶಿಕ್ಷಣ ಮಾನದಂಡಗಳ ಮಂಡಳಿ (ಬೈಟ್ಸ್)ನಿಂದ ಆಯೋಜಿಸಿದ್ದ 15ನೇ ಆವೃತ್ತಿ ಯಟಿಸಿಎಸ್ ಟೆಕ್ ಬೈಟ್ಸ್‌ನ ಮೈಸೂರು ಪ್ರಾದೇಶಿಕ ಫೈನಲ್‌ನಲ್ಲಿ ಎನ್‌ಐಇ ಕಾಲೇಜಿನ ಪಿ.ಆಯುಷ್ ವಿಜೇತರಾಗಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ರಸಪ್ರಶ್ನೆಯು ಟೆಕ್ ಡ್ಯಾಶ್‌ಬೋರ್ಡ್, ಟೆಕ್ ಗುರುತಿಸುವಿಕೆ, ಡೇಟಾ ವರ್ಲ್ಡ್, ಟೆಕ್ ಸಂಪರ್ಕಗಳು ಮತ್ತು ಜನರೇಟಿವ್ ಒಳನೋಟಗಳು ಎನ್ನುವ ಐದು ವಿಭಾಗದಲ್ಲಿ ನಡೆಯಿತು. ವಿಜೇತರಿಗೆ 12 ಸಾವಿರ ರೂ. ಮೌಲ್ಯದ ಉಡುಗೊರೆ ವೋಚರ್ ದೊರೆತಿದೆ.
ಮಹಾರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಂಶುಪಾಲ ಡಾ.ಬಿ.ಜಿ.ನರೇಶ್ ಕುಮಾರ್ ವಿಜೇತರಿಗೆ ಬಹುಮಾನ ವಿತರಿಸಿದರು. ಏಪ್ರಿಲ್ 5 ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಫೈನಲ್ ಸ್ಪರ್ಧೆ ಆಯೋಜಿಸಲಾಗಿದೆ.