ಸೋಮವಾರಪೇಟೆ ವಿವಿಧೋದ್ದೇಶ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್.ಟಿ.ಮಹೇಶ್ ತಿಮ್ಮಯ್ಯ, ಉಪಾಧ್ಯಕ್ಷರಾಗಿ ಬಿ.ಶಿವಪ್ಪ ಆಯ್ಕೆಯಾದರು. ಆಡಳಿತ ಮಂಡಳಿ ಸದಸ್ಯರು ಇದ್ದರು. 
ಜಿಲ್ಲೆ

ವಿವಿಧೋದ್ದೇಶ ಸಹಕಾರ ಸಂಘಕ್ಕೆ ಆಯ್ಕೆ

ಸೋಮವಾರಪೇಟೆ: ಇಲ್ಲಿನ ವಿವಿಧೋದ್ದೇಶ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಹೇಶ್ ತಿಮ್ಮಯ್ಯ ಹಾಗೂ ಉಪಾಧ್ಯಕ್ಷರಾಗಿ ಬಿ.ಶಿವಪ್ಪ ಆಯ್ಕೆಯಾದರು.

ಈಚೆಗೆ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ನಿರ್ದೇಶಕರರಾದ ಎಚ್.ಕೆ.ಮಾದಪ್ಪ, ರಾಘವ, ಶ್ರೀಕಾಂತ್, ಕೆ.ಬಿ.ಸುರೇಶ್, ವೆಂಕಪ್ಪ, ದರ್ಶನ್, ಶೋಭಿತಾ, ರೂಪಾ ಮತ್ತಿತರರು ಇದ್ದರು.