ಹಾನಗಲ್ಲ: ತಾಲೂಕಿನ ಮುಳಥಳ್ಳಿಯ ಕ್ರೀಡಾಪಟು ವೀರಪ್ಪ ಹಂಚಿನಮನಿ ಅವರು ಧಾರವಾಡದಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ 4 ಸ್ಪರ್ಧೆಗಳಲ್ಲಿ ವಿಜೇತರಾಗಿ, ಥೈಲ್ಯಾಂಡ್ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಹುಬ್ಬಳ್ಳಿಯ ರಾಮನಗರದಲ್ಲಿರುವ ಹರಿಜನ ಹೆಣ್ಣುಮಕ್ಕಳ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿರುವ ವೀರಪ್ಪ ಹಂಚಿನಮನಿ, ಕಳೆದ ನವೆಂಬರ್ನಲ್ಲಿ ಧಾರವಾಡದಲ್ಲಿ ಇಂಡಿಯಾ ಮಾಸ್ಟರ್ಸ್ ಗೇಮ್್ಸ ಫೆಡರೇಷನ್ ಆಯೋಜಿಸಿದ್ದ ಕರ್ನಾಟಕ ಮುಕ್ತ ರಾಷ್ಟ್ರೀಯ ಮಾಸ್ಟರ್ಸ್-2023ರ ಕ್ರೀಡಾಕೂಟದ 55 ರಿಂದ 60 ವರ್ಷದ ವಯೋಮಾನದ ವಿಭಾಗದಲ್ಲಿ 100 ಮೀ. ಓಟದಲ್ಲಿ ಪ್ರಥಮ, ಶಾಟ್ಫುಟ್ನಲ್ಲಿ ದ್ವಿತೀಯ, ಡಿಸ್ಕಸ್ ಥ್ರೋನಲ್ಲಿ ತೃತೀಯ, ಜಾವೆಲಿನ್ ಎಸೆತದಲ್ಲಿ ತೃತೀಯ ಸ್ಥಾನ ಪಡೆದಿದ್ದರು. ಈಗ ಥೈಲ್ಯಾಂಡ್ನಲ್ಲಿ ಫೆ. 27 ರಿಂದ 29ರವರೆಗೆ ಆಯೋಜಿಸಿರುವ ಥೈಲ್ಯಾಂಡ್ ಇಂಟರ್ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್-2024 ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.