ಜಿಲ್ಲೆ

ಎಣ್ಣೆಹೊಳೆಕೊಪ್ಪಲು ಸಹಕಾರ ಸಂಘಕ್ಕೆ ಆಯ್ಕೆ

ಪಾಂಡವಪುರ: ತಾಲೂಕಿನ ಎಣ್ಣೆಹೊಳೆಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ರೈತ ಸಂಘದ ಬೆಂಬಲಿತ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ.

ಸಂಘದ ಒಟ್ಟು 12 ಸ್ಥಾನಗಳ ಪೈಕಿ ಒರ್ವ ಜೆಡಿಎಸ್ ಬೆಂಬಲಿತ ಹಾಗೂ ಒರ್ವ ರೈತಸಂಘ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದಂತೆ 10 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಬ್ಬ ಸ್ವತಂತ್ರ್ಯ ಅಭ್ಯರ್ಥಿ, ಜೆಡಿಎಸ್ ಬೆಂಬಲಿತ 10 ಹಾಗೂ ರೈತಸಂಘ ಬೆಂಬಲಿತರಾಗಿ 10 ಅಭ್ಯರ್ಥಿಗಳು ಸೇರಿದಂತೆ ಒಟ್ಟು 21 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಉಳಿದಿದ್ದರು. ಈ ಪೈಕಿ ರೈತಸಂಘ ಬೆಂಬಲಿತ 10 ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ವೈ.ಎಸ್.ಧನಂಜಯ, ದೇವರಾಜು, ಜಿ.ಕೃಷ್ಣ, ವೈ.ಆರ್.ಗಿರೀಶ್, ಎಂ.ಪುಟ್ಟೇಗೌಡ, ಪಾಪೇಗೌಡ, ಮಹಿಳಾ ಮೀಸಲು ಕ್ಷೇತ್ರದಿಂದ ಬಿ.ಎನ್.ಅರ್ಪಿತಾ, ಶಿವಮ್ಮ, ಹಿಂದುಳಿದ ವರ್ಗದಿಂದ ವೈ.ಈ.ಪಾಪಣ್ಣ, ವೈ.ಎ.ನಾರಾಯಣ, ಪರಿಶಿಷ್ಟ ಜಾತಿಯಿಂದ ಗೋವಿಂದಯ್ಯ ಮತ್ತು ಪಂಗಡದಿಂದ ಬಿ.ಎನ್.ರಜೇಂದ್ರ ಆಯ್ಕೆಯಾಗಿದ್ದಾರೆ.