ಜಿಲ್ಲೆ

ಅರಳಕುಪ್ಪೆ ಸಹಕಾರ ಸಂಘಕ್ಕೆ ಆಯ್ಕೆ

ನಾಗೇಶ ಎಸ್

ಪಾಂಡವಪುರ: ತಾಲೂಕಿನ ಅರಳಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ರೈತಸಂಘ ಮತ್ತು ಕಾಂಗ್ರೆಸ್ ಬೆಂಬಲಿತ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎಸ್.ಸೋಮೇಗೌಡ, ಎಸ್.ಕೀರ್ತಿ, ಎ.ಜೆ.ಜಗದೀಶ್, ಎ.ಆರ್.ಮಹೇಶ್, ಎ.ಆರ್.ಅಲೋಕ, ನಾರಾಯಣ, ಸಿ.ಕೆ.ಪದ್ಮಮ್ಮ, ಆರ್.ಆರತಿ, ಡಿ.ಜಯರಾಮು, ಎ.ಆರ್.ಕೆಂಪೂಗೌಡ, ಕೆ.ನಾಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 11 ಸದಸ್ಯ ಬಲದ ಸಹಕಾರ ಸಂಘದ ಈ ಹಿಂದಿನ ಆಡಳಿತ ಮಂಡಳಿಯ ಅಧಿಕಾರಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ನೂತನ ನಿರ್ದೇಶಕರ ಆಯ್ಕೆಗೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ರೈತಸಂಘ ಮತ್ತು ಕಾಂಗ್ರೆಸ್ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿಗಳನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ನಿಬಂಧಕರ ಕಚೇರಿಯ ನಿರ್ಮಲಾ ಅವರು ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ರೈತಸಂಘ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ವಿತರಿಸ ಸಂಭ್ರಮಿಸಿದರು. ಅವಿರೋಧವಾಗಿ ಆಯ್ಕೆಗೊಂಡವರನ್ನು ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಅಭಿನಂದಿಸಿದರು.