ಜಿಲ್ಲೆ

ರಾಷ್ಟ್ರ ಮಟ್ಟಕ್ಕೆ ಆಯ್ಕೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಇತ್ತೀಚೆಗೆ ಏರ್ಪಡಿಸಿದ್ದ 2023-24ನೇ ಸಾಲಿನ ರಾಜ್ಯ ಮಟ್ಟದ ಬಾಸ್ಕೆಟ್​ ಬಾಲ್​ ಪಂದ್ಯಾವಳಿಯಲ್ಲಿ ನಗರದ ಕರ್ನಾಟಕ ಹೈಸ್ಕೂಲಿನ ವಿದ್ಯಾಥಿರ್ಗಳು ಉತ್ತಮ ಪ್ರದರ್ಶನ ತೋರುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಲೆ ವಿದ್ಯಾಥಿರ್ಗಳಾದ ರಮೇಶ ಬೆಕ್ಕೇರಿ, ವರುಣ ಸೀತಿಮನಿ, ತನ್ಮಯ ಪಾಟೀಲ, ಮಲ್ಲಿಕಾರ್ಜುನ ತುಪ್ಪದ ಹಾಗೂ ಪ್ರದಿಪ ಚೌಗುಲಾ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಏ. 27ರಿಂದ 30ರವರೆಗೆ ಹರಿಯಾಣದ ಗುರುಗಾವ್​ನಲ್ಲಿ ರಾಷ್ಟ್ರ ಮಟ್ಟದ ಬಾಸ್ಕೆಟ್​ ಬಾಲ್​ ಪಂದ್ಯಾವಳಿ ನಡೆಯಲಿದೆ.
ವಿದ್ಯಾಥಿರ್ಗಳ ಸಾಧನೆಗೆ ಸಂಸ್ಥೆ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ, ಕಾರ್ಯದಶಿರ್ ಡಿ.ಎಸ್​. ರಾಜಪುರೋಹಿತ, ಶಾಲಾ ಸುಧಾರಣಾ ಸಮಿತಿ ಉಪಾಧ್ಯಕ್ಷ ವಿ.ಎನ್​. ದೇಶಪಾಂಡೆ, ಆಡಳಿತಾಧಿಕಾರಿ ಜಿ.ಆರ್​. ಭಟ್​, ವಸಂತ ಮುರುಡೇಶ್ವರ, ಪ್ರಾಂಶುಪಾಲ ಎನ್​.ಎನ್​. ಸವಣೂರ, ತರಬೇತುದಾರರಾದ ರಾಜಾರಾಮ್​ ಮೊಕಾಶಿ, ಉದಯ ಅಬ್ಬಾಯಿ, ಆರ್​.ಎ್​. ಮೂಲಿಮನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.