ಜಿಲ್ಲೆ

ಶಿರಹಟ್ಟಿ ತಾಲೂಕಿನ ವಿವಿಧ ಗ್ರಾಪಂಗೆ ಆಯ್ಕೆ

ಶಿರಹಟ್ಟಿ: ತಾಲೂಕಿನ ಮಾಗಡಿ ಗ್ರಾಪಂನ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ಮೈಲಾರೆಪ್ಪ ಹಾದಿಮನಿ ಮತ್ತು ಉಪಾಧ್ಯಕ್ಷೆಯಾಗಿ ಲಲಿತಾ ಪಾಟೀಲ ಅವಿರೋಧ ಆಯ್ಕೆಯಾದರು.


ಉಳಿದಂತೆ ಬೆಳ್ಳಟ್ಟಿ ಗ್ರಾಪಂಗೆ ರಮೇಶ ನಿರ್ವಾಣಿಶೆಟ್ಟರ (ಅಧ್ಯಕ್ಷ), ಗಂಗವ್ವ ತಳವಾರ (ಉಪಾಧ್ಯಕ್ಷೆ).

ಛಬ್ಬಿ ಗ್ರಾಪಂಗೆ ಸುವರ್ಣ ಆರಿ(ಅಧ್ಯಕ್ಷೆ), ಕೇಶವ ಅಂಗಡಿ(ಉಪಾಧ್ಯಕ್ಷ).

ಹೆಬ್ಬಾಳ ಗ್ರಾಪಂಗೆ ಫಕೀರಪ್ಪ ನರಸಮ್ಮನವರ(ಅಧ್ಯಕ್ಷ), ವೀರಣ್ಣ ಮೆಣಶಿನಕಾಯಿ (ಉಪಾಧ್ಯಕ್ಷ).

ಕೋಗನೂರ ಗ್ರಾಪಂಗೆ ತಿರಕವ್ವ ಹರಿಜನ(ಅಧ್ಯಕ್ಷೆ), ಕಸ್ತೂರೆವ್ವ ತಳ್ಳಳ್ಳಿ (ಉಪಾಧ್ಯಕ್ಷೆ).

ಮಾಚೇನಹಳ್ಳಿ ಗ್ರಾಪಂಗೆ ಶರೀಫಸಾಬ ನದಾಫ(ಅಧ್ಯಕ್ಷ), ರೇಣವ್ವ ಬಂಡಿವಡ್ಡರ(ಉಪಾಧ್ಯಕ್ಷೆ).

ಮಜ್ಜೂರ ಗ್ರಾಪಂಗೆ ಗನಿಸಾಬ ಬರದೂರ(ಅಧ್ಯಕ್ಷ), ರೇಣುಕಾ ಲಮಾಣಿ(ಉಪಾಧ್ಯಕ್ಷೆ).

ತಾರೀಕೊಪ್ಪ ಗ್ರಾಪಂಗೆ ರತ್ನಾ ಈರಗಾರ(ಅಧ್ಯಕ್ಷೆ), ಪ್ರೇಮಾ ಲಮಾಣಿ(ಉಪಾಧ್ಯಕ್ಷೆ).

ಕಡಕೋಳ ಗ್ರಾಪಂಗೆ ಹೇಮಾ ಹರ್ಲಾಪೂರ(ಅಧ್ಯಕ್ಷೆ), ಗಿರಿಜವ್ವ ಲಮಾಣಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯಾ ಗ್ರಾಪಂ ಸದಸ್ಯರು ಸನ್ಮಾನಿಸಿದರು.