ಜಿಲ್ಲೆ

ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕುಮಟಾ: ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ತಾಲೂಕು ಮಟ್ಟದ 17 ವರ್ಷದ ಒಳಗಿನವರ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್​ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ವಿಭಾಗದಲ್ಲಿ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಶ್ರೀಕುಮಾರ ಹೆಗಡೆ, ಮೋಹನ ಬಾಳಗಿ, ವಿಠ್ಠಲ ರಾಮಚಂದ್ರ ಪ್ರಭು, ಆದಿತ್ಯ ಕಾಮತ್, ಬಿ.ವಿ. ಗಗನ ತಂಡ ಪ್ರಥಮ ಸ್ಥಾನ, ಟೇಬಲ್ ಟೆನಿಸ್​ನಲ್ಲಿ ಶ್ರೀಕುಮಾರ ಹೆಗಡೆ, ಎಚ್.ಯು. ಸುಮುಖ, ಅನ್ಮೋಲ ನಾಯ್ಕ, ಪ್ರೇಮ ಶೇಟ್, ಸಂಪ್ರೀತ ನಾಯ್ಕ ತಂಡ ಪ್ರಥಮ ಸ್ಥಾನ ಪಡೆದಿದೆ.

ಬಾಲಕಿಯರ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನಿತ್ಯಶ್ರೀ ರಾಮಚಂದ್ರ ಭಟ್ಟ, ಎಂ.ಎಸ್. ರಾಧಿಕಾ, ಪಾವನಿ ಗಣಪತಿ ನಾಯ್ಕ, ತೃಪ್ತಿ ಮುಕುಂದ ಮಡಿವಾಳ ತಂಡ ಪ್ರಥಮ ಸ್ಥಾನ, ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ನಿತ್ಯಶ್ರೀ ಭಟ್ಟ, ತನ್ವಿ ಹೆಗಡೆ, ಸಾನ್ವಿ ಹೆಗಡೆ, ಸಾನಿಕಾ ಎಸ್.ಜಿ., ಧನ್ಯಾ ನಾಯ್ಕ ತಂಡ ಪ್ರಥಮ ಸ್ಥಾನ, ಚೆಸ್ ಸ್ಪರ್ಧೆಯಲ್ಲಿ ಸವಿತಾ ಸಾರಂಗ್, ಸಿಂಚನಾ ಗಣಪತಿ ಭಟ್ಟ ಪ್ರಥಮ ಸ್ಥಾನ ಪಡೆದಿದ್ದಾರೆ.