ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಕ್ರೀಡೆಗೆ ಆಯ್ಕೆಯಾದ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯ ಕ್ರೀಡಾಪಡುಗಳೊಂದಿಗೆ ವಿವಿ ಸಿಬ್ಬಂದಿ ಇದ್ದಾರೆ. 
ಜಿಲ್ಲೆ

ಬಾಲ್​ ಬ್ಯಾಡ್​ಮಿಂಟನ್​ ಕ್ರೀಡಾಕೂಟಕ್ಕೆ ಆಯ್ಕೆ

ಗಿರೀಶ ಸಗರ

ವಿಜಯಪುರ: ಇಲ್ಲಿನ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಬಾಲ್​ ಬ್ಯಾಡ್​ಮಿಂಟನ್​ ಕ್ರೀಡಾಪಟುಗಳು 2024&25ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡೆಗೆ ಆಯ್ಕೆಯಾಗಿದ್ದಾರೆ.

ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಬಾಲ್​ಬ್ಯಾಡ್​ಮಿಂಟನ್​ ಕ್ರೀಡೆ ಮಾ. 29 ರಿಂದ ಏ. 1ರ ವರೆಗೆ ತಮಿಳುನಾಡಿನ ಕಾರೈಕುಡಿಯ ಅಲಗಪ್ಪ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿದೆ. ಸದರಿ ಕ್ರೀಡಾಕೂಟದ ತಂಡಕ್ಕೆ ತರಬೇತುದಾರರಾಗಿ ಮಂಜಪ್ಪ ಸಿ.ಎಸ್​., ವ್ಯವಸ್ಥಾಪಕರಾಗಿ ಮಹಾಂತೇಶ ಎಲ್​. ಭಾಗವಹಿಸುವರೆಂದು ವಿವಿ ಪ್ರಕಟಣೆ ತಿಳಿಸಿದೆ.

ಆಯ್ಕೆಯಾದ ಕ್ರೀಡಾಪಟುಗಳ ತಂಡಕ್ಕೆ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ., ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್​.ಎಂ. ಚಂದ್ರಶೇಖರ, ಕ್ರೀಡಾ ನಿರ್ದೇಶನಾಲಯದ ನಿರ್ದೇಶಕ, ಮುಖ್ಯಸ್ಥ ಡಾ. ಹನುಮಂತಯ್ಯ ಪೂಜಾರ, ಸಹ ನಿರ್ದೇಶಕ ವಿಶ್ವನಾಥ ನಡಕಟ್ಟಿ ಹಾಗೂ ಶಿಕ್ಷಣ ನಿಕಾಯದ ಡೀನ್​ ಪ್ರೊ. ಸಕ್ಪಾಲ್​ ಹೂವಣ್ಣ ಶುಭ ಹಾರೈಸಿದ್ದಾರೆ.