ಜಿಲ್ಲೆ

ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕರ್ನಾಟಕ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ನಯನಾ ಎಚ್.ಎ. ಅವರು 2025ರ ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆಯಾಗಿದ್ದಾರೆ. ವಿಜಯನಗರ ಜಿಲ್ಲೆ ಹರಪನಹಳ್ಳಿಯ ನಯನಾ, ಜ. 26ರಂದು ನವದೆಹಲಿಯ ಕರ್ತವ್ಯಪಥದಲ್ಲಿ ನಡೆಯುವ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕ 2/24 ಎನ್‌ಸಿಸಿ ಬಟಾಲಿಯನ್‌ನಿಂದ ಆಯ್ಕೆಯಾಗಿರುವ ಏಕೈಕ ಕೆಡೆಟ್ ನಯನಾ, ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಽಸಲಿದ್ದಾರೆ. ಈ ವಿಶೇಷ ಸಾಧನೆಗೆ ಎಎನ್‌ಒ ಕ್ಯಾಪ್ಟನ್ ಡಾ. ವೈ.ಎಸ್. ರಾಹುತ್, ಕರ್ನಲ್ ಜೆ.ಆರ್. ಚೌಧರಿ, ಲೆಪ್ಟಿನೆಂಟ್ ಕರ್ನಲ್ ವೈ.ಎಸ್. ರನಾವತ್ ಅವರ ಮಾರ್ಗದರ್ಶನ ಹಾಗೂ ಪ್ರಾಚಾರ್ಯ ಡಾ. ಡಿ.ಬಿ. ಕರಡೋನಿ ಅವರ ಪ್ರೋತ್ಸಾಹ ಕಾರಣ ಎಂದು ನಯನಾ ಪ್ರತಿಕ್ರಿಯಿಸಿದ್ದಾರೆ.